ಬೆಂಗಳೂರು: ಘರ್ಜಿಸಿದ ಜೆಸಿಬಿ, 16.88 ಕೋಟಿ ಮೌಲ್ಯದ ಸರ್ಕಾರಿ ಭೂಮಿ ವಶಕ್ಕೆ

0
42

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಜೆಸಿಬಿ ಘರ್ಜಿಸಿದೆ. ಒತ್ತುವರಿಯಾಗಿರುವ ರೂ. 16.88 ಕೋಟಿ ಅಂದಾಜು ಮೌಲ್ಯದ ಒಟ್ಟು ಎಕರೆ 9 ಎಕರೆ 17 ಗುಂಟೆ ಸರ್ಕಾರಿ ಜಮೀನನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ನೇತೃತ್ವದಲ್ಲಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.

ಜಿಲ್ಲೆಯಾದ್ಯಂತ ವಿವಿಧ ತಾಲ್ಲೂಕುಗಳ ತಹಶೀಲ್ದಾರ್‌ಗಳು ತಮ್ಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಗುಂಡುತೋಪು, ಕರೆ, ಅಪ್ಪಯ್ಯನತೋಪು, ಖರಾಬು, ಕಾಲುದಾರಿ, ಸ್ಮಶಾನ, ಅಂಜನೇಯಸ್ವಾಮಿ ದೇವರ ಇನಾಂ, ಸರ್ಕಾರಿ ಕಟ್ಟೆ, ಹದ್ದುಗಿಡದಹಳ್ಳ ಜಾಗಗಳಿಗೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಕೈಗೊಂಡರು.

ಬೆಂಗಳೂರು ಪೂರ್ವ ತಾಲ್ಲೂಕಿನ ಕೆ.ಆರ್.ಪುರ ಹೋಬಳಿಯ ಸಾದರಮಂಗಲ ಗ್ರಾಮದ ಸರ್ವೆ ನಂಬರ್ 32ರ ಗುಂಡುತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.12 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ. 5 ಕೋಟಿಗಳಾಗಿರುತ್ತದೆ.

ಬಿರದಹಳ್ಳಿ ಹೋಬಳಿಯ ನಿಂಬೆಕಾಯಿಪುರ ಗ್ರಾಮದ ಸ.ನಂ 42ರ ಕೆರೆ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.05 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ. 0.25 ಲಕ್ಷಗಳಾಗಿರುತ್ತದೆ.

ವರ್ತೂರು ಹೋಬಳಿಯ ದೊಡ್ಡನೆಕ್ಕುಂದಿ ಗ್ರಾಮದ ಸ.ನಂ 27ರ ಅಪ್ಪಯ್ಯನತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 4 ಎಕರೆ 0.26 ಗುಂಟೆಗಳಾರುತ್ತದೆ. ವರ್ತೂರು ಹೋಬಳಿಯ ಭೋಗನಹಳ್ಳಿ ಗ್ರಾಮಗಳ ಸ.ನಂ 48ರ ಖರಾಬು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.17 ಗುಂಟೆಗಳಾಗಿದ್ದು, ಅಂದಾಜು ಮೌಲ್ಯದ ರೂ.1.48 ಕೋಟಿ.

ಆನೇಕಲ್ ತಾಲೂಕು ಕಸಬಾ ಹೋಬಳಿಯ ಮರಸೂರು ಅಗ್ರಹಾರ ಗ್ರಾಮದ ಸ.ನಂ. 18, 19,16ರ ಮಧ್ಯದ ಕಾಲುದಾರಿ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.06 ಗುಂಟೆಗಳಾಗಿದ್ದು, ಅಂದಾಜು ಮೌಲ್ಯದ ರೂ.0.15 ಲಕ್ಷ.

ಜಿಗಣಿ ಹೋಬಳಿಯ ಬನ್ನೇರುಘಟ ಗ್ರಾಮದ ಸ.ನಂ. 27 ಮತ್ತು 36 ರ ಸ್ಮಶಾನ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.17 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ.1.10 ಕೋಟಿಗಳಾಗಿರುತ್ತದೆ.

ಸರ್ಜಾಪುರ ಹೋಬಳಿಯ ಮುತ್ತನಲ್ಲೂರು ಗ್ರಾಮದ ಸ.ನಂ. 118/3,124,125 ರ ಮಧ್ಯದ ಖರಾಬು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.08 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ. 0.40 ಲಕ್ಷಗಳಾಗಿರುತ್ತದೆ.

ಬೆಂಗಳೂರು ದಕ್ಷಿಣ ತಾಲ್ಲೂಕು: ತಾವರೆಕೆರೆ ಹೋಬಳಿಯ ಹುಲುವೇನಹಳ್ಳಿ ಗ್ರಾಮದ ಸ.ನಂ 86ರ ಅಂಜನೇಯದೇವರ ಇನಾಂ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 1 ಎಕರೆಯಾಗಿದ್ದು, ಅಂದಾಜು ಮೌಲ್ಯ ರೂ 1.00 ಕೋಟಿಗಳಾಗಿರುತ್ತದೆ.

ಬೇಗೂರು ಹೋಬಳಿಯ ಮೈಲಸಂದ್ರ ಗ್ರಾಮದ ಸ.ನಂ 15ರ ಕರೆ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.06 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ.1 ಕೋಟಿಗಳಾಗಿರುತ್ತದೆ.

ಇನ್ನು ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಪಿಳ್ಳಹಳ್ಳಿ ಗ್ರಾಮದ ಸ.ನಂ 54ರ ಸರ್ಕಾರಿ ಕಟ್ಟೆ ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 1 ಎಕರೆ 0.20 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ. 4.50 ಕೋಟಿ.

ಯಲಹಂಕ ತಾಲ್ಲೂಕಿನ ಜಾಲ ಹೋಬಳಿಯ ಬಂಡಿಕೋಡಿಗೆಹಳ್ಳಿ ಗ್ರಾಮದ ಹದ್ಭುಗಿಡದಹಳ್ಳ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.20.12 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 2.00 ಕೋಟಿಗಳಾಗಿರುತ್ತದೆ.

Previous articleಧಾರವಾಡ: ಬೆಣ್ಣಿಹಳ್ಳ ಸೇತುವೆ ದುರಸ್ಥಿಗೆ ತಜ್ಞರ ಅಭಿಪ್ರಾಯ ಸಂಗ್ರಹ
Next articleಟ್ರಂಪ್ ಸುಂಕ ಸಮರಕ್ಕೆ ತಿರುಗೇಟು: ಅಮೆರಿಕಕ್ಕೆ ಎಲ್ಲಾ ಅಂಚೆ ಸೇವೆ ಬಂದ್

LEAVE A REPLY

Please enter your comment!
Please enter your name here