ಬಳ್ಳಾರಿ: ಬಳ್ಳಾರಿ ಮತ್ತು ಶಿವಮೊಗ್ಗದಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಪ್ರಮುಖವಾದ ಮಾಹಿತಿಯೊಂದಿದೆ. ಎರಡು ಜಿಲ್ಲೆಗಳಲ್ಲಿ ನೇಮಕಾತಿಗಳು ನಡೆಯುತ್ತಿದ್ದು, ಆಸಕ್ತರು, ಅರ್ಹರು ಅರ್ಜಿಗಳನ್ನು ಸಲ್ಲಿಸಬಹುದು.
ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ವಡ್ಡಿನಕಟ್ಟೆ ಗ್ರಾಮದ ಕಿತ್ತೂರುರಾಣಿ ಚನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ನೂತನವಾಗಿ ಆರಂಭಿಸಿರುವ ವಿಜ್ಞಾನ ವಿಭಾಗಕ್ಕೆ ಅತಿಥಿ ಉಪನ್ಯಾಸಕರನ್ನು ಗೌರವಧನ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ.
ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆಯನ್ನು ಪದವಿಪೂರ್ವ ಕಾಲೇಜನ್ನಾಗಿ ಉನ್ನತೀಕರಿಸಲಾಗಿದ್ದು, ಪ್ರಸ್ತಕ ಶೈಕ್ಷಣಿಕ ಸಾಲಿನಲ್ಲಿ ವಿಜ್ಞಾನ ವಿಭಾಗ ಪ್ರಾರಂಭಿಸಲಾಗಿದೆ. ಆದ್ದರಿಂದ ಅರ್ಹ, ಆಸಕ್ತರಿಂದ ಅರ್ಜಿ ಕರೆಯಲಾಗಿದೆ.
ಹುದ್ದೆಗಳ ವಿವರ: ಕನ್ನಡ ಉಪನ್ಯಾಸಕರು-1, ಆಂಗ್ಲ ಉಪನ್ಯಾಸಕರು-1, ಭೌತಶಾಸ್ತ್ರ ಉಪನ್ಯಾಸಕರು-1, ರಸಾಯನಶಾಸ್ತ್ರ-1, ಗಣಿತ-1, ಜೀವಶಾಸ್ತ್ರ-1.
ಅರ್ಹ ಅಭ್ಯರ್ಥಿಗಳು ಆಯಾ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿ.ಇಡಿ ಪೂರ್ಣಗೊಳಿಸಿರಬೇಕು. ಅತಿಥಿ ಉಪನ್ಯಾಸಕರಿಗೆ ಮಾಸಿಕ 18,150 ರೂ. ಗೌರವಧನ ನೀಡಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಪ್ರಾಂಶುಪಾಲರು, ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆ (ಪ.ಪಂ)-485, ವಡ್ಡಿನಕಟ್ಟೆ, ಸಂಡೂರು (ತಾ), ಬಳ್ಳಾರಿ (ಜಿ) ಇಲ್ಲಿಗೆ ಆಗಸ್ಟ್ 20 ರೊಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ kreiskrcrs0485@gmail.com ಅಥವಾ ಮೊಬೈಲ್ ಸಂಖ್ಯೆ 9611279510ಗೆ ಸಂಪರ್ಕಿಸಬಹುದು.
ಶಿವಮೊಗ್ಗದಲ್ಲಿ ನೇರ ಸಂದರ್ಶನ: ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಖಾಲಿಯಿರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಆಗಸ್ಟ್ 16ರಂದು ನೇರ ಸಂದರ್ಶನ ಆಯೋಜನೆ ಮಾಡಲಾಗಿದೆ.
ಪ್ರಾಣಿ ಆಹಾರ ಶಾಸ್ತ್ರ, ಪಶು ವೈದ್ಯಕೀಯ ಪರೋಪಜೀವಿ ಶಾಸ್ತ್ರ, ಜಾನುವಾರು ಸಾಕಾಣಕಾ ಸಂಕೀರ್ಣ (ಕುಕ್ಕುಟ/ ಜಾನುವಾರು ಉತ್ಪಾದನಾ ನಿರ್ವಹಣ ಶಾಸ್ತ್ರ), ಪಶುವೈದ್ಯಕೀಯ ಶರೀರ ಕ್ರಿಯಾ ಮತ್ತು ಜೀವ ರಸಾಯನ ಶಾಸ್ತ್ರ, ಪಶುವೈದ್ಯಕೀಯ ಶಸ್ತ್ರಚಿಕಿತ್ಸೆ ಮತ್ತು ಕ್ಷ-ಕಿರಣ ಶಾಸ್ತ್ರ, ಪಶುವೈದ್ಯಕೀಯ ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರ, ಪಶುವೈದ್ಯಕೀಯ ಚಿಕಿತ್ಸಾ ಸಂಕೀರ್ಣ-ಚಿಕಿತ್ಸಾ ವಿಭಾಗ ಮತ್ತು ಶಸ್ತ್ರ ಚಿಕಿತ್ಸೆ ವಿಭಾಗಗಳಲ್ಲಿ ಸಹಾಯಕ ಪ್ರಾದ್ಯಾಪಕರ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ನಿಯಮಾವಳಿಯಂತೆ ಹಾಗೂ ಮಾರ್ಗಸೂಚಿಯಂತೆ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182-200872.
ಕೊಡಗು ಜಿಲ್ಲೆಯಲ್ಲಿ ಅರ್ಜಿ ಆಹ್ವಾನ: 2025-26ನೇ ಸಾಲಿನಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ವ್ಯಾಪ್ತಿಗೆ ಬರುವ ಅಲೆಮಾರಿ ಸಮುದಾಯದವರಿಗೆ ಆರ್ಥಿಕ ಅಭಿವೃದ್ಧಿಯನ್ನು ಹೊಂದಲು ವಿವಿಧ ಯೋಜನೆಯಡಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ-ಉದ್ಯೋಗ (ನೇರಸಾಲ) ಯೋಜನೆ (ಘಟಕ ವೆಚ್ಚ ರೂ.1 ಲಕ್ಷ), ಉದ್ಯಮಶೀಲತಾ ಯೋಜನೆ (ಘಟಕ ವೆಚ್ಚ ರೂ.2 ಲಕ್ಷ), ಉದ್ಯಮಶೀಲತಾ ಯೋಜನೆ (ಸರಕು ಸಾಗಣಿಕೆ/ ನಾಲ್ಕು ಚಕ್ರಗಳ ವಾಹನ ಹಾಗೂ ಇತ್ಯಾದಿ)(ಘಟಕ ವೆಚ್ಚ ರೂ.4 ಲಕ್ಷ), ಭೂ ಒಡೆತನ ಯೋಜನೆ, ಮೈಕ್ರೋ ಕ್ರೆಡಿಟ್ ಯೋಜನೆ ಮತ್ತು ಗಂಗಾ ಕಲ್ಯಾಣ ಯೋಜನೆ.
ಸೇವಾ ಸಿಂಧು ಪೋರ್ಟಲ್ ಮೂಲಕ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್‍ಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08272-225531 ಅನ್ನು ಸಂಪರ್ಕಿಸಬಹುದಾಗಿದೆ.