ಮೈಸೂರು: ಮೈಸೂರಿನಲ್ಲಿ ಕೆಲಸ ಹುಡುತ್ತಿರುವ ಅಭ್ಯರ್ಥಿಗಳಿಗೆ ಪ್ರಮುಖವಾದ ಮಾಹಿತಿಯೊಂದಿದೆ. ಮೈಸೂರು ಜಿಲ್ಲಾ ಪಂಚಾಯತಿ ಕಛೇರಿ ನೇಮಕಾತಿ ಅಧಿಸೂಚನೆಯೊಂದನ್ನು ಹೊರಡಿಸಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಲು 12/8/2025 ಕೊನೆಯ ದಿನಾಂಕವಾಗಿದೆ.
ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಹೊರಗುತ್ತಿಗೆ ಆಧಾರದಲ್ಲಿ ಇ-ಪಂಚಾಯತ್ ಯೋಜನೆಯಡಿ ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕರು (ADPM) ಹುದ್ದೆಯನ್ನು ಭರ್ತಿ ಮಾಡಲಾಗುತ್ತದೆ.
ಮೈಸೂರು ಜಿಲ್ಲಾ ಪಂಚಾಯತ್ ಕಛೇರಿಗೆ ಇ-ಪಂಚಾಯತ್ ಯೋಜನೆಯಡಿ ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕ ಹುದ್ದೆಗೆ ಜಿಲ್ಲಾ ಪಂಚಾಯತಿ ವೆಬ್‌ಸೈಟ್ https://mysore.nic.in ಮೂಲಕ ಅರ್ಜಿಯನ್ ಸಲ್ಲಿಸಬೇಕಿದೆ.
ವೇತನ, ಇತರ ವಿವರಗಳು: ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕರು. ಹುದ್ದೆಗಳ ಸಂಖ್ಯೆ 1. ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಬಿಇ (ಸಿಎಸ್/ ಇ&ಸಿ/ ಐಎಸ್)/ ಎಂಸಿಎ/ ಬಿಸಿಎ ಪದವಿ ಪಡೆದಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 30,000 ರೂ. ನಿಗದಿ ಮಾಡಲಾಗಿದೆ. ಸೇವಾ ಶುಲ್ಕ+ ಸೇವಾ ತೆರಿಗೆ ಪ್ರತ್ಯೇಕ.
ಹೊರ ಗುತ್ತಿಗೆ ಆಧಾರದಲ್ಲಿ ಇ-ಪಂಚಾಯತ್ ಯೋಜನೆಯಡಿ ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕರು (ADPM) ಹುದ್ದೆಯನ್ನು ಭರ್ತಿ ಮಾಡಲಾಗುತ್ತಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಸಬೇಕು.
ಮೆರಿಟ್ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಸದರಿ ಹುದ್ದೆಯು ಸರ್ಕಾರದ ಖಾಯಂ ಹುದ್ದೆಯಾಗಿರುವುದಿಲ್ಲ. ಮೇಲೆ ತಿಳಿಸಿರುವ ಹುದ್ದೆಗೆ ನಿರ್ದಿಷ್ಟಪಡಿಸಿರುವ ನಿಗದಿತ ವಿದ್ಯಾರ್ಹತೆಗಳನ್ನು ಹೊರತುಪಡಿಸಿ ಇತರೆ ವಿಷಯ/ ವಿಭಾಗಗಳ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ನಿಗದಿಪಡಿಸಿರುವ ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಉತ್ತೀರ್ಣಗೊಂಡಿರತಕ್ಕದ್ದು ಹಾಗೂ ಪದವಿ ಪ್ರಮಾಣ ಪತ್ರವನ್ನು ಹೊಂದಿರತಕ್ಕದ್ದು.
ಸದರಿ ನೇಮಕಾತಿಯು ತಾತ್ಕಾಲಿಕವಾಗಿದ್ದು, ಸೇವೆಯು ತೃಪ್ತಿಕರವಾಗಿರದಿದ್ದಲ್ಲಿ ಯಾವುದೇ ಮುನ್ಸೂಚನೆ ನೀಡದೆ ನೇಮಕಾತಿಯನ್ನು ರದ್ದುಗೊಳಿಸಲಾಗುವುದು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 12.
ಕೊಪ್ಪಳದಲ್ಲಿ ಕೆಲಸ ಖಾಲಿ ಇದೆ: ಕೊಪ್ಪಳ ಜಿಲ್ಲೆ ಕನಕಗಿರಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿವಿಧ ವೃತ್ತಿಗಳಿಗಾಗಿ 2025-26ನೇ ಸಾಲಿನಲ್ಲಿ ಅವಶ್ಯಕತೆ ಇರುವ ಅತಿಥಿ ಬೋಧಕರ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ.
ಖಾಲಿ ಇರುವ 1 ಎಲೆಕ್ಟ್ರೀಷಿಯನ್ ಹುದ್ದೆಗೆ ಐಟಿಐ, ಎಟಿಎಸ್, ಡಿಇಇ ಅಥವಾ ಬಿಇ ಎಲೆಕ್ಟ್ರೀಷಿಯನ್ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಹಾಕಬಹುದು. 1 ಫಿಟ್ಟರ್ ಹುದ್ದೆಗೆ ಐಟಿಐ, ಎಟಿಎಸ್, ಡಿಎಂಇ ಅಥವಾ ಬಿಇ (ಮೆಕಾನಿಕಲ್) ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬೇಕು.
ಈ ಎರಡು ಹುದ್ದೆಗೆಳಿಗೆ ನಿಗದಿತ ವಿದ್ಯಾರ್ಹತೆಯೊಂದಿಗೆ 2 ವರ್ಷಗಳ ಅನುಭವ ಹೊಂದಿರಬೇಕು. ಆಸಕ್ತ ಅರ್ಹ ಅಭ್ಯರ್ಥಿಗಳು ಖುದ್ದಾಗಿ ಅಥವಾ ಅಂಚೆ ಮೂಲಕ ಆಗಸ್ಟ್ 11ರ ಸಂಜೆ 5 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9448259832.
ಗಂಗಾವತಿ ಐಟಿಐನಲ್ಲಿಯೂ ವಿವಿಧ ವೃತ್ತಿಗಳಿಗಾಗಿ 2025-26ನೇ ಸಾಲಿನಲ್ಲಿ ಅವಶ್ಯಕತೆ ಇರುವ ಅತಿಥಿ ಬೋಧಕರ ಹುದ್ದೆಗೆ ಸೂಕ್ತ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
7 ಎಲೆಕ್ಟ್ರೀಷಿಯನ್ ಹುದ್ದೆಗೆ ಐಟಿಐ, ಎಟಿಎಸ್, ಡಿಇಇ ಅಥವಾ ಬಿಇ ಎಲೆಕ್ಟ್ರೀಷಿಯನ್ ವಿದ್ಯಾರ್ಹತೆ ಹೊಂದಿರಬೇಕು. 1 ಫಿಟ್ಟರ್ ಹುದ್ದೆಗೆ ಐಟಿಐ, ಎಟಿಎಸ್, ಡಿಎಂಇ ಅಥವಾ ಬಿಇ (ಮೆಕಾನಿಕಲ್) ವಿದ್ಯಾರ್ಹತೆ ಹೊಂದಿರಬೇಕು. 1 ಮೆಕಾನಿಕ್ ಮೋಟರ್ ವೆಹಿಕಲ್ ಹುದ್ದೆಗೆ ಐಟಿಐ, ಎಟಿಎಸ್, ಡಿಪ್ಲೋಮಾ ಇನ್ ಅಟೋಮೊಬೈಲ್ಸ್ ಅಥವಾ ಡಿಎಂಇ ವಿದ್ಯಾರ್ಹತೆ ಹೊಂದಿರಬೇಕು.
1 ಟರ್ನರ್ ಹುದ್ದೆಗೆ ಐಟಿಐ, ಎಟಿಎಸ್, ಡಿಎಂಇ ಅಥವಾ ಬಿಇ (ಮೆಕಾನಿಕಲ್) ವಿದ್ಯಾರ್ಹತೆ ಹೊಂದಿರಬೇಕು. 2 ವೇಲ್ಡರ್ ಹುದ್ದೆಗೆ ಐಟಿಐ, ಎಟಿಎಸ್, ಡಿಇಇ ಅಥವಾ ಬಿಇ (ಮೆಕಾನಿಕಲ್) ವಿದ್ಯಾರ್ಹತೆ ಹೊಂದಿರಬೇಕು. ಈ ಎಲ್ಲಾ ಹುದ್ದೆಗೆಳಿಗೆ ನಿಗದಿತ ವಿದ್ಯಾರ್ಹತೆ ಜೊತೆ 2 ವರ್ಷಗಳ ಅನುಭವ ಹೊಂದಿರಬೇಕು.
ಅಭ್ಯರ್ಥಿಗಳು ಖುದ್ದಾಗಿ ಅಥವಾ ಅಂಚೆಮೂಲಕ ಆಗಸ್ಟ್ 11ರ ಸಂಜೆ 5 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ 9448259832 ಸಂಖ್ಯೆಗೆ ಕರೆ ಮಾಡಿ.