ಸಿಗಂದೂರು ಸೇತುವೆ ನೋಡಲು ಬೆಂಗಳೂರು-ತಾಳಗುಪ್ಪ ವಿಶೇಷ ರೈಲು: ವೇಳಾಪಟ್ಟಿ, ನಿಲ್ದಾಣ

0
164

ಬೆಂಗಳೂರು: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ಸಂಪರ್ಕ ಕಲ್ಪಿಸಲು ಶರಾವತಿ ಹಿನ್ನೀರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಾಣ ಮಾಡಿರುವ ಸೇತುವೆ ಲೋಕಾರ್ಪಣೆಯಾಗಿದೆ. ಸಿಗಂದೂರು ತೂಗು ಸೇತುವೆಯನ್ನು ಸುಮಾರು 473 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇದು ಶಿವಮೊಗ್ಗದ ಪ್ರಮುಖ ಆಕರ್ಷಣೆಯಾಗಿದ್ದು, ಇದನ್ನು ನೋಡಲು ಹೋಗುವವರಿಗೆ ಭಾರತೀಯ ರೈಲ್ವೆ ಸಿಹಿಸುದ್ದಿಯನ್ನು ನೀಡಿದೆ.

ಬೆಂಗಳೂರಿನ ಯಶವಂತಪುರ ಮತ್ತು ತಾಳಗುಪ್ಪ ನಡುವೆ ವಿಶೇಷ ರೈಲನ್ನು ಓಡಿಸಲಾಗುತ್ತದೆ ಎಂದು ನೈಋತ್ಯ ರೈಲ್ವೆ ಘೋಷಣೆ ಮಾಡಿದೆ. ರೈಲು ಸಂಚಾರದ ದಿನಾಂಕ, ವೇಳಾಪಟ್ಟಿ ಮತ್ತು ನಿಲ್ದಾಣದ ಮಾಹಿತಿಯನ್ನು ನೀಡಿದೆ. ಬೆಂಗಳೂರು ನಗರದಿಂದ ಈ ರೈಲಿನ ಮೂಲಕ ಸಾಗರ ತಲುಪಿದರೆ ಅಲ್ಲಿಂದ ಸಿಗಂದೂರು ಬ್ರಿಡ್ಜ್ ಸೇರಿ ಸುತ್ತಮುತ್ತಲಿನ ಪ್ರದೇಶಗಳನ್ನು ವೀಕ್ಷಣೆ ಮಾಡಬಹುದಾಗಿದೆ.

ರೈಲಿನ ವೇಳಾಪಟ್ಟಿ: ನೈಋತ್ಯ ರೈಲ್ವೆ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಯಶವಂತಪುರ ಮತ್ತು ತಾಳಗುಪ್ಪ ನಡುವೆ (ರೈಲು ಸಂಖ್ಯೆ 06587/ 06588) ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲು ನಿರ್ಧರಿಸಲಾಗಿದೆ ಎಂದು ಹೇಳಿದೆ.

ರೈಲು ಸಂಖ್ಯೆ 06587 ಯಶವಂತಪುರ – ತಾಳಗುಪ್ಪ ಎಕ್ಸ್‌ಪ್ರೆಸ್ ವಿಶೇಷ ರೈಲು ಜುಲೈ 25ರಂದು ರಾತ್ರಿ 10:30ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಬೆಳಗ್ಗೆ 4:15ಕ್ಕೆ ತಾಳಗುಪ್ಪವನ್ನು ತಲುಪಲಿದೆ.

ಈ ರೈಲು ಮಾರ್ಗದಲ್ಲಿ ತುಮಕೂರು (11:18/ 11:20 PM), ತಿಪಟೂರು (00:13/00:15 AM), ಅರಸೀಕೆರೆ (00:33/00:38 AM), ಬೀರೂರು (01:13/01:15 AM), ತರೀಕೆರೆ (01:43/01:45 AM), ಭದ್ರಾವತಿ (02:00/02:02 AM), ಶಿವಮೊಗ್ಗ ಟೌನ್ (02:20/02:25 AM), ಆನಂದಪುರಂ (03:10/03:12 AM) ಮತ್ತು ಸಾಗರ ಜಂಬಗಾರು (03:35/03:37 AM) ನಿಲ್ದಾಣಕ್ಕೆ ಆಗಮಿಸಿ/ ನಿರ್ಗಮಿಸಲಿದೆ.

ರೈಲು ಸಂಖ್ಯೆ 06588 ತಾಳಗುಪ್ಪ-ಯಶವಂತಪುರ ಎಕ್ಸ್‌ಪ್ರೆಸ್ ವಿಶೇಷ ರೈಲು ಜುಲೈ 26ರಂದು ಬೆಳಗ್ಗೆ 08:15 ಗಂಟೆಗೆ ತಾಳಗುಪ್ಪದಿಂದ ಹೊರಟು, ಅದೇ ದಿನ ಸಂಜೆ 04:50 ಗಂಟೆಗೆ ಯಶವಂತಪುರವನ್ನು ತಲುಪಲಿದೆ.

ಮಾರ್ಗದಲ್ಲಿ ಈ ರೈಲು ಸಾಗರ ಜಂಬಗಾರು (08:30/08:32 AM), ಆನಂದಪುರಂ (09:00/09:02 AM), ಶಿವಮೊಗ್ಗ ಟೌನ್ (09:45/09:50 AM), ಭದ್ರಾವತಿ (10:15/10:17 AM), ತರೀಕೆರೆ (10:30/10:32 AM), ಬೀರೂರು (11:00/11:02 AM), ಅರಸೀಕೆರೆ (12:00/12:10 PM), ತಿಪಟೂರು (12:28/12:30 PM) ಮತ್ತು ತುಮಕೂರು (03:18/03:20 PM) ನಿಲ್ದಾಣಕ್ಕೆ ಆಗಮಿಸಿ/ ನಿರ್ಗಮಿಸಲಿದೆ.

ರೈಲು ಒಟ್ಟು 20 ಬೋಗಿಯನ್ನು ಒಳಗೊಂಡಿರಲಿದೆ. ಇದರಲ್ಲಿ 01 ಎಸಿ ಟು ಟೈರ್, 02 ಎಸಿ ತ್ರಿ ಟೈರ್, 10 ಕ್ಲೀಪರ್ ಕ್ಲಾಸ್, 05 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 02 ಸೆಕೆಂಡ್ ಕ್ಲಾಸ್ ಲಗೇಜ್-ಕಮ್-ಬ್ರೇಕ್ ವ್ಯಾನ್ ಬೋಗಿಗಳು ಇರಲಿವೆ.

Previous articleಬ್ಯಾಂಕ್‌ಗೆ ವಂಚಿಸಿ ಬರೋಬ್ಬರಿ 20 ವರ್ಷಗಳ ಬಳಿಕ ಸಿಕ್ಕಿಬಿದ್ದ ಚಾಲಾಕಿ
Next articleರಾಷ್ಟ್ರಧ್ವಜ ತಯಾರಿಕೆಗೆ ಸೌರ ವಿದ್ಯುತ್ ಬಲ: ಶುದ್ಧ ಇಂಧನದಲ್ಲಿ ತಿರಂಗಾ ಸಿದ್ಧ

LEAVE A REPLY

Please enter your comment!
Please enter your name here