Home Advertisement
Home ತಾಜಾ ಸುದ್ದಿ ರುದ್ರಭೂಮಿ ಕೊರತೆ: ತುಂಬಿದ ಹಳ್ಳ ದಾಟಿ ಅಂತ್ಯಕ್ರಿಯೆ

ರುದ್ರಭೂಮಿ ಕೊರತೆ: ತುಂಬಿದ ಹಳ್ಳ ದಾಟಿ ಅಂತ್ಯಕ್ರಿಯೆ

0
145

ರಾಯಚೂರು: ಜಿಲ್ಲೆಯ ಸಿರವಾರ ತಾಲ್ಲೂಕಿನ ಮಾಚನೂರು ಗ್ರಾಮದಲ್ಲಿ ರುದ್ರಭೂಮಿ ಅಲಭ್ಯದ ಪರಿಣಾಮ ಗ್ರಾಮದಲ್ಲಿ ಯಾರೇ ಮೃತಪಟ್ಟರು ಹಳ್ಳ ದಾಟಿ ಗೈರಾಣಿ ಭೂಮಿಯಲ್ಲಿ ಅಂತ್ಯಕ್ರಿಯೆ ಮಾಡುವಂತ ಪರಿಸ್ಥಿತಿ ಗ್ರಾಮಸ್ಥರದ್ದಾಗಿದೆ.
ಈಗಾಗಲೇ ಮಳೆಗಾಲ ಆರಂಭಗೊಂಡಿದ್ದು, ಜಿಲ್ಲೆಯಲ್ಲಿ ಹೆಚ್ಚಿನ ಪ್ರಾಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಹಳ್ಳ ತುಂಬಿ ಹರಿಯುತ್ತಿವೆ. ಈ ಸಂದರ್ಭದಲ್ಲಿ ಅಂತ್ಯಸಂಸ್ಕಾರದ ರುದ್ರಭೂಮಿ ಇಲ್ಲದ ಕಾರಣ ಗ್ರಾಮಸ್ಥರು ಮೃತರು ಅಂತ್ಯಸಂಸ್ಕಾರ ಮಾಡಬೇಕಾದರೆ ಜೀವ ಕೈಯಲ್ಲಿ ಹಿಡಿದು ಶವವನ್ನು ಹೊತ್ತುಕೊಂಡು ಸಾಗುವ ಪರಿಸ್ಥಿತಿ ಮಾಚನೂರು ಗ್ರಾಮ ಜನರ ಸಮಸ್ಯೆಯಾಗಿದೆ. ಕೂಡಲೇ ತಾಲೂಕು ಆಡಳಿತ ಗ್ರಾಮಸ್ಥರಿಗೆ ರುದ್ರಭೂಮಿ ಮಂಜೂರು ಮಾಡಿಸಬೇಕಾಗಿದೆ.
ಗ್ರಾಮಸ್ಥರ ಹೇಳಿಕೆ: ಗ್ರಾಮದಲ್ಲಿ ಶವ ಸಂಸ್ಕಾರ ಮಾಡಲು ರುದ್ರಭೂಮಿ ಇಲ್ಲದೆ ಹಳ್ಳದ ಪಕ್ಕದಲ್ಲಿರುವ ಗೈರಾಣಿ ಭೂಮಿ ಶವಸಂಸ್ಕಾರ ಮಾಡಲಾಗುತ್ತಿದೆ. ಈಗ ಮಳೆಗಾಲ ಹಳ್ಳಕ್ಕೆ ಹೆಚ್ಚಿನ ನೀರು ಬಂದರೆ ಹಳ್ಳ ದಾಟುವುದಕ್ಕೆ ಕಷ್ಟ ಆದ್ದರಿಂದ ಕೂಡಲೇ ಗ್ರಾಮಕ್ಕೆ ರುದ್ರಭೂಮಿ ಮಂಜೂರು ಮಾಡಿಸಿದರೆ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ ಎಂದು ಗ್ರಾಮದ ಮುಖಂಡ ವಿಜಯ ಕುಮಾರ ಮಾಚನೂರು ತಿಳಿಸುತ್ತಾರೆ.

Previous articleಮಾಜಿ ಕಾಂಗ್ರೆಸ್ ಶಾಸಕ ಕಾಕಾ ಸಾಹೇಬ್ ಪಾಟೀಲ್ ನಿಧನ
Next articleಕಾಕಾ ಸಾಹೇಬ್ ಪಾಟೀಲ್ ನಿಧನಕ್ಕೆ ಸಿಎಂ ಸಂತಾಪ