ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಮೃತ್ಯು

0
26

ಹುಬ್ಬಳ್ಳಿ: ನಿರಂತರ ನೀರು ಪೂರೈಕೆ ಪೈಪ್ ಲೈನ್ ಅಳವಡಿಕೆ ನಡೆಯುತ್ತಿದ್ದ ಮಂಟೂರು ರಸ್ತೆಯಲ್ಲಿ ಮಣ್ಣು ಕುಸಿದು ಉಸಿರುಗಟ್ಟಿ ಚೇತನ ಜಾಧವ (೩೦) ಎಂಬುವವರು ಮಂಗಳವಾರ ಮೃತಪಟ್ಟಿದ್ದಾರೆ.
ಎಂಟು ಅಡಿ ಮಣ್ಣು ತೆಗೆದು, ಪೈಪ್‌ ಅಳವಡಿಕೆ ಕಾಮಗಾರಿ ಮಂಟೂರು ರಸ್ತೆಯಲ್ಲಿ ಕೆಲ ದಿನಗಳಿಂದ ನಡೆಯುತ್ತಿತ್ತು. ಚೇತನ ಜೊತೆ ಮತ್ತೊಬ್ಬ ಕಾರ್ಮಿಕ ಕೆಲಸ ಮಾಡುತ್ತಿದ್ದ. ಕೆಳಗೆ ಇಳಿದು ಚೇತನ ಮಣ್ಣು ತೆಗೆಯುತ್ತಿದ್ದಾಗ, ಏಕಾಏಕಿ ಮಣ್ಣು ಕುಸಿದು, ಅವರ ಮೇಲೆ ಬಿದ್ದಿದೆ.
ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಸುಹಾಸ್ ಶೆಟ್ಟಿ ಕೊಲೆ ಪ್ರಕರಣ: ಇನ್ನೋರ್ವ ಆರೋಪಿಯ ಸೆರೆ
Next articleಜೈ ಹೋ ಆರ್ ಸಿ ಬಿ…ಫಲಿಸಿದ ಪೂಜಾ ಫಲ