ನಾಲೆಯಲ್ಲಿ ಮುಳುಗಿ ಒಂದೇ ಕುಟುಂಬದ : ಮೂವರು ಮಕ್ಕಳು ನೀರುಪಾಲು

0
44

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ನಾರ್ತ್ ಬ್ಯಾಂಕ್‌ ಬಳಿ ಇರುವ ವಿ.ಸಿ ನಾಲೆಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಮಕ್ಕಳು ಸಾವಿಗೀಡಾಗಿರುವ ಆಘಾತಕಾರಿ ಘಟನೆ ಸೋಮವಾರ ನಡೆದಿದೆ.

ಈ ದುರ್ಘಟನೆಯಲ್ಲಿ ಮೈಸೂರಿನ ಗೌಸಿಯಾನಗರದ ಸೋನ್ (17) ಸಿಮ್ರಾನ್(16),ಸಿದ್ದಿಶ್ (9) ಎಂಬ ಮೂವರು ಮಕ್ಕಳು ಸಾವಿಗೀಡಾಗಿದ್ದಾರೆ.

ಮೃತರು ಚಿಕ್ಕಾರಳ್ಳಿ ಗ್ರಾಮದ ಸಂಬಂಧಿಕರ ಮನೆಗೆ
ಆಗಮಿಸಿದ್ದರು. ಸೋನು, ಸಿದ್ದೀಶ್ ಮೃತದೇಹಪತ್ತೆಯಾಗಿದ್ದು, ಸಿಮ್ರಾನ್ ಮೃತದೇಹಕ್ಕಾಗಿ
ಶೋಧಕಾರ್ಯ ನಡೆದಿದೆ. ಕೆ ಆರ್ ಎಸ್‌ ಪೊಲೀಸ್‌
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಅಪ್ರಾಪ್ತ ಬಾಲಕನಿಗೆ ಥಳಿತ ಪ್ರಕರಣ:೯ ಜನರ ಬಂಧನ
Next article೨೪ ಗಂಟೆಯೊಳಗೆ ಸಂಚು ರೂಪಿಸಿ ಕೊಲೆ ಮಾಡಿದ ಆರೋಪಿಗಳ ಬಂಧನ