ಚೆನ್ನೈ: ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ 376ರನ್‌ಗಳಿಗೆ ಆಲೌಟ್ ಆಯಿತು.
ಮೊದಲ ದಿನದಾಟದಲ್ಲಿ ಅಶ್ವಿನ್–ಜಡೇಜ ಜೋಡಿಯ ಆಟದಿಂದಾಗಿ 6 ವಿಕೆಟ್ ನಷ್ಟಕ್ಕೆ 339 ರನ್ ಕಲೆಹಾಕಿತ್ತು, ಇಂದು ಭಾರತ 2ನೇ ದಿನದಾಟ ಮುಂದುವರೆಸಿ 376ರನ್‌ಗಳಿಗೆ ಅಲೌಟ್ ಆಗಿದೆ. ಭಾರತ ನೀಡಿರುವ 376ರನ್‌ಗಳ ಗುರಿ ಬೆನ್ನು ಹತ್ತಿರುವ ಬಾಂಗ್ಲಾದೇಶ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಆರಂಭಿಕ ಆಘಾತ ಅನುಭವಿಸಿದೆ.