ಹುಬ್ಬಳ್ಳಿ ಡ್ರಗ್ಸ್ ಹಬ್ ಆಗೋಕೆ ಬಿಡುವುದಿಲ್ಲ

0
17

ಹುಬ್ಬಳ್ಳಿ : ರಾಜ್ಯದಲ್ಲಿ ಡ್ರಗ್ಸ್ ನಿರ್ಮೂಲನೆ ಮಾಡುವ ಬಗ್ಗೆ ನಮ್ಮ ಸರ್ಕಾರ ತೀರ್ಮಾನ ಮಾಡಿದೆ. ಹುಬ್ಬಳ್ಳಿಯಲ್ಲೂ ಡ್ರಗ್ಸ್ ನಿಮೂರ್ಲನೆಗೆ ಕ್ರಮ ಜರುಗಿಸಲು ಸೂಚಿಸಿದ್ದೇನೆ. ಯಾವುದೇ ಕಾರಣಕ್ಕೂ ಹುಬ್ಬಳ್ಳಿ ಡ್ರಗ್ಸ್ ಹಬ್ ಆಗಲು ಬಿಡುವುದಿಲ್ಲ ಎಂದು ಗೃಹ ಸಚಿವ ಡಾ. ಜಿಮ ಪರಮೇಶ್ವರ ಹೇಳಿದರು.
ಕಮೀಶನರ್ ಕಚೇರಿಯಲ್ಲಿ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ಕಾನೂನು ಸುವ್ಯಸ್ಥೆ ಕಟ್ಟುನಿಟ್ಟಾಗಿ ನೋಡಿಕೊಳ್ಳಬೇಕು. ಎಸ್ಐ ಹುದ್ದೆ ಮೇಲ್ಮಟ್ಟದ ಅಧಿಕಾರಿಗಳು ಶಾಲಾ ಕಾಲೇಜಿಗೆ ಪ್ರತಿ ತಿಂಗಳು ಹೋಗಿ ಕಾನೂನು ಜಾಗೃತಿ, ಸಂಚಾರ ನಿಯಮ, ಪೊಲೀಸ್ ವ್ಯವಸ್ಥೆ ಬಗ್ಗೆ ತಿಳಿಸಬೇಕು. ಮಕ್ಕಳಲ್ಲಿ ಪೊಲೀಸ್ ವ್ಯವಸ್ಥೆ ಬಗ್ಗೆ ಒಳ್ಳೆಯ ಭಾವನೆ ಬರುವ ರೀತಿ ಕಾರ್ಯಚಟುವಟಿಕೆ ಮಾಡಲು ಸೂಚಿಸಲಾಗಿದೆ ಎಂದರು.
ಜಾತಿ ನಿಂದನೆ ಪ್ರಕರಣ, ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣ ಕುರಿತು ಪ್ರತಿ ತಿಂಗಳು ವರದಿ ಸಲ್ಲಿಸಬೇಕು. ಬಡವರು, ಶೋಷಿತರು, ಅಸಹಾಯಕರು ಇರುವ ಕಡೆ ತೆರಳಿ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಬಗ್ಗೆ ತಿಳಿಸಲು ಆದೇಶಿಸಿದ್ದೇನೆ ಎಂದರು

Previous articleಹಣದ ವಿಚಾರಕ್ಕೆ ವೈರತ್ವ: ಗೆಳೆಯನ ಕೊಂದು ರುಂಡ ಸಹಿತ ಊರಿಗೆ ಬಂದ ಆರೋಪಿ
Next articleಮೀಸಲಾತಿ: ಶ್ರಾವಣದಿಂದ ಮತ್ತೆ ಹೋರಾಟ