ಅವಹೇಳನಕಾರಿ ಇನ್​ಸ್ಟಾಗ್ರಾಂ ಪೋಸ್ಟ್​: ಸಂಘರ್ಷ

0
7

ರಾಯಚೂರು: ಯುವತಿಯ ಇನ್​ಸ್ಟಾಗ್ರಾಂ ಖಾತೆಯಿಂದ ವಿವಾದಾತ್ಮಕ ಪೋಸ್ಟ್​ ಮಾಡಲಾಗಿದೆ ಎಂಬ ವಿಚಾರಕ್ಕೆ ಹಿಂದೂ ಯುವಕರ ಮೇಲೆ ಅನ್ಯ ಕೋಮಿನ ಯುವಕರು ಹಲ್ಲೆ ಮಾಡಿರುವ ಘಟನೆ ಸಿಂಧನೂರಿನ ಆರ್‌ಹೆಚ್ ಕ್ಯಾಂಪ್2 ರಲ್ಲಿ ನಡೆದಿದೆ.
ಯುವತಿಯ ಹೆಸರಿನಲ್ಲಿ ಫೇಕ್ ಅಕೌಂಟ್ ಮೂಲಕ ಅವಹೇಳನಕಾರಿ ಪೋಸ್ಟ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದೇ ವಿಚಾರಕ್ಕೆ ಬಂಧಿತರು ಸಾಮಾಜಿಕ ಜಾಲತಾಣದ ಗ್ರೂಪ್‍ನಲ್ಲಿದ್ದ ಯುವಕರನ್ನ ವಿಚಾರಿಸಲು ತೆರಳಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ನಗರದ ದುರ್ಗಾದೇವಿ ದೇವಾಲಯದ ಮುಂದೆ ಗಲಾಟೆ ನಡೆದಿದೆ ಎನ್ನಲಾಗಿದೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಿಂಧನೂರು ಗ್ರಾಮೀಣ ಠಾಣೆಯ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

Previous articleಪತ್ನಿಯ ಕಣ್ಣೆದುರೇ ಪತಿಯ ಹತ್ಯೆ
Next articleಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು