ಗುಂಡು ಹೊಡೆದುಕೊಂಡು ಪೊಲೀಸ್ ಪೇದೆ ಆತ್ಮಹತ್ಯೆ

0
5

ವಾಡಿ: ಚುನಾವಣೆ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆಯೋರ್ವರು ಗುಂಡು ಹೊಡೆದುಕೊಂಡು ತಾನೇ ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೇ.4 ಗುರುವಾರ ಚಿತ್ತಾಪುರ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ.
ಚಿತ್ತಾಪುರ ತಹಶಿಲ್ದಾರರ ಕಚೇರಿಯಲ್ಲಿ ಚುನಾವಣೆ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆ ಮಲ್ಲಿಕಾರ್ಜುನ, ಇತರ ಸಿಬ್ಬಂದಿಗಳೊಂದಿಗೆ ಬುಧವಾರ ರಾತ್ರಿ ಗಸ್ತು ತಿರುಗುತ್ತಿದ್ದರು. ಮಧ್ಯರಾತ್ರಿ ಸುಮಾರು 2.30 ಗಂಟೆಗೆ ತಹಶಿಲ್ದಾರ್ ಕಚೇರಿಯ ಕಟ್ಟಡದ ಮೇಲೆ ಹೋಗಿದ್ದಾರೆ ಎನ್ನಲಾಗಿದ್ದು, ಬೆಳಗಿನ ಜಾವ ಕೈಯಲ್ಲಿ ಬಂದೂಕು ಇದ್ದು, ಗಂಟಲಿನ ಮೂಲಕ ತಲೆಯಿಂದ ಗುಂಡು ಪಾರಾದ ಸ್ಥಿತಿಯಲ್ಲಿ ಪೊಲೀಸ್‌ ಪೇದೆಯ ಮೃತದೇಹ ಪತ್ತೆಯಾಗಿದೆ. ಕಸ ಗುಡಿಸಲು ಹೋದ ಪೌರಕಾರ್ಮಿಕ ಮಹಿಳೆಯೊಬ್ಬರಿಂದ ಘಟನೆ ಬೆಳಕಿಗೆ ಬಂದಿದೆ. ಇದು ಕೊಲೆಯೋ ಅಥವ ಆತ್ಮಹತ್ಯೆಯೋ ಎಂಬುದರ ನಿಖರವಾಗಿ ತಿಳಿದುಬಂದಿಲ್ಲ. ಘಟನೆಯಿಂದ ಖಾಕಿ ಪಾಳೆಯದಲ್ಲಿ ತಲ್ಲಣ ಉಂಟಾಗಿದೆ.

Previous articleಅರ್ಧ ರೊಟ್ಟಿ ಕಡಿಮೆ ತಿಂದರೂ ಮಕ್ಕಳಿಗೆ ಶಿಕ್ಷಣ ಕೊಡಿಸಿ
Next articleಕೇಕರೆ ಮನೆ ಮೇಲೆ ಐಟಿ ದಾಳಿ