ತಾರಾತಿಗಡಿ: ಕೈ ಕೃಪಾಪೋಷಿತ ನಾಟಕ ಮಂಡಳಿ ಅವರು ಪ್ರತಿದಿನ ರಾತ್ರಿ..ಅಭಿನಯಿಸುತಿರುವ..ಬಿಗ್ ಬಾಸ್ ಎಂಬ ಸುಂದರ ಸಾಮಾಜಿಕ ನಾಟಕ ಭರ್ಜರಿಯಾಗಿ ಓಡುತ್ತಿದೆ. ಎಲ್ಲ ಮಂದಿ ಅಲ್ಲಿನ ಭರ್ಜರಿ ಮನರಂಜನೆ ಸೀನ್‌ಗಳನ್ನು ಮನಸ್ಸಿಗೆ ಹಚ್ಚಿಕೊಂಡು ನೋಡುತ್ತಿದ್ದಾರೆ.
ನಾಟಕದ ಮುಖ್ಯಪಾತ್ರಧಾರಿ ಮದ್ರಮಾಣ್ಣ- ಬಂಡೇಸಿ ಫೈಟಿಂಗ್ ದೃಶ್ಯಗಳನ್ನು ನೋಡಿದ ಜನರು ಒನ್ಸ್ ಮೋರ್ ಎಂದು ಕೂಗು ಹಾಕುತ್ತಿದ್ದಾರೆ. ಜೋರಾಗಿ ಡೈಲಾಗ್ ಹೇಳುತ್ತಿದ್ದ ಈ ಇಬ್ಬರು ಹೀರೋ ಈಗ ಮೆತ್ತಗಾಗಿ ಬಿಗ್ ಬಾಸ್ ಹೇಗಂತಾರೋ ಹಾಗೆ ಅನ್ನುವ ದೃಶ್ಯ ಪ್ರೇಕ್ಷಕರ ಕರುಳು ಕಿವಿಚಿದಂತಾಗುತ್ತದೆ..
ಬಿಳಿಬಿಳಿ ಗಡ್ಡ. ಕೆದರಿದ ಕೂದಲು ಮಾಡಿಕೊಂಡ ಬಂಡೇಸಿ ಆಂಗ್ರಿ ಯಂಗ್ ಮ್ಯಾನ್ ರೂಲ್ ನಂದು ಅಂದುಕೊಂಡಿದ್ದರೂ…ವೇಟ್…ವೇಟ್ ಅನಿಸಿಕೊಂಡು ಪ್ಲೇಟ್‌ನಲ್ಲಿನ ಉಪ್ಪಿಟ್ಟೂ ತಿನ್ನುವುದನ್ನು ಮರೆತಿದ್ದಾರೆ…
ಇಡೀ ನಾಟಕದಲ್ಲಿ ಪಾತ್ರಧಾರಿಗಳು ಬಿಗ್ ಬಾಸ್..ಬಿಗ್ ಬಾಸ್ ಅಂದರೂ ಸಹ ಬಿಗ್ ಬಾಸ್ ಹೂಂ ಇಲ್ಲ..ಉಪ್ಪಿನಕಾಯಿ ಇಲ್ಲ ಅನ್ನುವ ಹಾಗೆ ಸೊಂಡಿ ಮುಂದೆ ಮಾಡಿ ಕುಳಿತಿದ್ದಾರೆ…ಅಮ್ಮೋರು…ಕೆಂಪುಡುಗ .ನೋಡೋಣ..
ವೇಟ್ ಅನ್ನುವ ದೃಶ್ಯವಂತೂ ಮನಮೋಹಕವಾಗಿದೆ…ಇನ್ನು ಕಮಲೇಸಿ ಗ್ಯಾಂಗಿನವರು…ಇವರು ಪತಿ ಇವರಿಗೆ ಬಿಗ್ ಬಾಸೇ ಗತಿ ಅಂತ ಕಿಸಕ್ಕನೇ ನಗುವ ಸೀನ್ ಮಜವಾಗಿದೆ…ರಾಜಗಾಂಭೀರ್ಯದಿಂದ..ಲೇವೇಗೌಡರು…ಅವರುಗೂ ಬಾಸ್…ಇವರಿಗೂ ಬಾಸ್..
ನನಗೆ ನಾನೇ ಬಿಗ್ ಬಾಸ್ ಅನ್ನುತ್ತಿರುವಾಗಲೇ ಪರದೆ ಜಾರುತ್ತದೆ…ಮುಂದಿನ ಶೋ ಇನ್ನರ್ಧಗಂಟೆ ಎನ್ನುವ ಅನೌನ್ಸಮೆಂಟೂ ಆಗುತ್ತದೆ. ಕೈ ನಾಟಕ ಯಾವಾಗ ಮುಗಿಯುತ್ತೋ ಏನೋ ನಂತರದ ಕಮಲದ ನಾಟಕವೋ…ಅವರ ನಾಟಕವೋ…ಎಂದು ಪ್ರೇಕ್ಷಕರು ಆಕಾಶದ ಕಡೆ ನೋಡಿ ಕೈ ಮುಗಿದರು….
























