ನವದೆಹಲಿ: 2030ರ ಕಾಮನ್ ವೆಲ್ತ್ ಕ್ರೀಡಾಕೂಟಕ್ಕಾಗಿ ಬಿಡ್ ಸಲ್ಲಿಕೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಬಿಡ್ ಅಂಗೀಕಾರವಾದರೆ ಗುಜರಾತ್ ಸರ್ಕಾರ ಜೊತೆಗೆ ಆತಿಥೇಯ ಸಹಯೋಗ ಒಪ್ಪಂದ ಮತ್ತು ಅನುದಾನ-ಸಹಾಯ ಅನುಮೋದನೆಗೆ ಸಹಿ ಹಾಕಲು ಸಂಪುಟ ಅನುಮೋದನೆ ನೀಡಲಿದೆ.
ವಿಶ್ವ ದರ್ಜೆಯ ಕ್ರೀಡಾಂಗಣಗಳು, ಅತ್ಯಾಧುನಿಕ ತರಬೇತಿ ಸೌಲಭ್ಯಗಳು ಮತ್ತು ಉತ್ಸಾಹಭರಿತ ಕ್ರೀಡಾ ಸಂಸ್ಕೃತಿಯನ್ನು ನೀಡುವ ಆದರ್ಶ ಆತಿಥೇಯ ನಗರ ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ನರೇಂದ್ರ ಮೋದಿ ಕ್ರೀಡಾಂಗಣವು 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್ ಅನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಈಗಾಗಲೇ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ.
ಈಗ 72 ದೇಶಗಳಿಂದ ದೊಡ್ಡ ಪ್ರಮಾಣದ ಭಾಗವಹಿಸುವಿಕೆಗೆ ಸಾಕ್ಷಿಯಾಗುವ ಕ್ರೀಡಾಕೂಟಗಳು ನಡೆಯಲಿವೆ. ಉದ್ಯೋಗಗಳನ್ನು ಸೃಷ್ಟಿಸಲು, ಪ್ರವಾಸೋದ್ಯಮವನ್ನು ಹೆಚ್ಚಿಸಲು ಮತ್ತು ಕ್ರೀಡೆಗಳನ್ನು ಮೀರಿ ವಿವಿಧ ವಲಯಗಳಲ್ಲಿ ವೃತ್ತಿಪರ ಅವಕಾಶಗಳನ್ನು ಸೃಷ್ಟಿಸಲು ಈ ಕ್ರೀಡಾಕೂಟ ಆಯೋಜಿಸಲಾಗುತ್ತದೆ.
2030ರ ಕಾಮನ್ ವೆಲ್ತ್ ಕ್ರೀಡಾಕೂಟ ಬಿಡ್ ಸಲ್ಲಿಕೆಗೆ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಪ್ರಸ್ತಾವನೆ ಸಿದ್ಧಗೊಳಿಸಿತ್ತು. ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆ ಅನುಮೋದಿಸಲಾಯಿತು.
ಸರ್ಕಾರದ ಸಂಬಂಧಿತ ಸಚಿವಾಲಯಗಳಿಂದ ಅಗತ್ಯವಿರುವ ಖಾತರಿಗಳೊಂದಿಗೆ ಅತಿಥೇಯ ಸಹಯೋಗ ಒಪ್ಪಂದಕ್ಕೆ ಸಹಿ ಹಾಕಲು ಸಹ ಸಂಪುಟ ಸಭೆಯು ಅನುಮೋದನೆ ನೀಡಿದೆ. ಬಿಡ್ ಅಂಗೀಕಾರವಾದರೆ, ಇಲಾಖೆಗಳು ಮತ್ತು ಪ್ರಾಧಿಕಾರಗಳು ಮತ್ತು ಗುಜರಾತ್ ಸರ್ಕಾರಕ್ಕೆ ಅಗತ್ಯವಿರುವ ಅನುದಾನಗಳ ಅನುಮೋದನೆ ತ್ವರಿತವಾಗಿ ಲಭ್ಯವಾಗಲಿದೆ.
ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ 72 ದೇಶಗಳ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಕ್ರೀಡಾಕೂಟದ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡುವ ಹೆಚ್ಚಿನ ಸಂಖ್ಯೆಯ ಕ್ರೀಡಾಪಟುಗಳು, ತರಬೇತುದಾರರು, ತಾಂತ್ರಿಕ ಅಧಿಕಾರಿಗಳು, ಪ್ರವಾಸಿಗರು, ಮಾಧ್ಯಮದವರು ಸೇರಿದಂತೆ ಇತರರು ಭಾಗವಹಿಸುವುದನ್ನು ಇದು ಒಳಗೊಂಡಿರುತ್ತದೆ. ಸ್ಥಳೀಯ ವ್ಯವಹಾರಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಆದಾಯವನ್ನು ಗಳಿಸುವ ಅವಕಾಶ ಲಭಿಸುತ್ತದೆ.
ಅಹಮದಾಬಾದ್ ವಿಶ್ವ ದರ್ಜೆಯ ಕ್ರೀಡಾಂಗಣಗಳು, ಅತ್ಯಾಧುನಿಕ ತರಬೇತಿ ಸೌಲಭ್ಯಗಳು ಮತ್ತು ಉತ್ಸಾಹಭರಿತ ಕ್ರೀಡಾ ಸಂಸ್ಕೃತಿಯನ್ನು ನೀಡುವ ಆದರ್ಶ ಆತಿಥೇಯ ನಗರ. ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ನರೇಂದ್ರ ಮೋದಿ ಕ್ರೀಡಾಂಗಣವು 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್ ಅನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಈಗಾಗಲೇ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ.
ಕ್ರೀಡೆಗಳನ್ನು ಮೀರಿ, ಭಾರತದಲ್ಲಿ ಕಾಮನ್ ವೆಲ್ತ್ ಕ್ರೀಡಾಕೂಟ ಆಯೋಜಿಸುವುದರಿಂದ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಾಧ್ಯವಾಗುತ್ತದೆ. ಜೊತೆಗೆ ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ಲಕ್ಷಾಂತರ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುವುದು ಸೇರಿದೆ.
ಇದಲ್ಲದೆ, ಕ್ರೀಡಾ ವಿಜ್ಞಾನ, ಕಾರ್ಯಕ್ರಮ, ಸ್ಪರ್ಧೆ, ಸಮಾರಂಭ, ಸಭೆ, ಸಮಾವೇಶ ಕಾರ್ಯಾಚರಣೆಗಳು ಮತ್ತು ನಿರ್ವಹಣೆ, ಸಾಗಣೆ (ಲಾಜಿಸ್ಟಿಕ್ಸ್) ಮತ್ತು ಸಾರಿಗೆ ಸಂಯೋಜಕರು, ಪ್ರಸಾರ ಮತ್ತು ಮಾಧ್ಯಮ, ಐಟಿ ಮತ್ತು ಸಂವಹನ, ಸಾರ್ವಜನಿಕ ಸಂಪರ್ಕ ಮತ್ತು ಸಂವಹನ ಮತ್ತು ಇತರ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ವೃತ್ತಿಪರರು ಉತ್ತಮ ಅವಕಾಶಗಳನ್ನು ಪಡೆಯಲಿದ್ದಾರೆ.