ಬೆಂಗಳೂರು: ದರ್ಶನ್ ಸೇರಿದಂತೆ ರೇಣುಕಾಸ್ವಾಮಿ ಕೊಲೆ ಪ್ರಕರಣದ 7 ಆರೋಪಿಗಳ ಜಾಮೀನು ಸುಪ್ರೀಂಕೋರ್ಟ್‌ನಿಂದ ರದ್ದುಗೊಂಡಿದೆ. ಯಾವುದೇ ಕ್ಷಣದಲ್ಲಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಜೈಲಿಗೆ ಕಳಿಸುವ ನಿರೀಕ್ಷೆ ಇದೆ.
ಈಗಾಗಲೇ ನಟ ದರ್ಶನ್ ಅಭಿಮಾನಿಗಳು ನಟಿ ರಮ್ಯಾಗೆ ಅಶ್ಲೀಲ ಕಮೆಂಟ್‌ಗಳನ್ನು ಹಾಕಿದ್ದಾರೆ. ಈ ಕುರಿತು ದೂರು ಸಹ ದಾಖಲಾಗಿದ್ದು, ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ಇಂತಹ ಸಂದರ್ಭದಲ್ಲಿ ನಟ ದರ್ಶನ್ ಜಾಮೀನು ಸುಪ್ರೀಂಕೋರ್ಟ್‌ನಲ್ಲಿ ರದ್ದಾಗಿದೆ. ಈಗ ದರ್ಶನ್ ಜೈಲು ಸೇರುವುದು ಖಚಿತವಾಗಿದೆ. ಕೋರ್ಟ್ ತೀರ್ಪು ಪ್ರಕಟವಾಗುತ್ತಿದ್ದಂತೆಯೇ ರಮ್ಯಾ ಪೋಸ್ಟ್ ಒಂದನ್ನು ಹಾಕಿದ್ದಾರೆ.
ರಮ್ಯಾ ಪೋಸ್ಟ್

ಕರ್ನಾಟಕ ಸರ್ಕಾರ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ, ದರ್ಶನ್, ಜಗದೀಶ್, ಅನು ಕುಮಾರ್, ಪ್ರದೋಶ್, ನಾಗರಾಜು, ಲಕ್ಷ್ಮಣ್ ಜಾಮೀನು ರದ್ದುಗೊಂಡಿರುವುದನ್ನು ಪ್ರಶ್ನೆ ಮಾಡಿತ್ತು. ಈ 7 ಆರೋಪಿಗಳ ಜಾಮೀನು ರದ್ದುಗೊಂಡಿದೆ.
ನಟಿ ರಮ್ಯಾ ತಮ್ಮ ಪೋಸ್ಟ್‌ನಲ್ಲಿ ಸುಪ್ರೀಂಕೋರ್ಟ್ ಇಂದು ತನ್ನ ತೀರ್ಪಿನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಇತರರ ಜಾಮೀನು ಆದೇಶವನ್ನು ಬದಿಗೆ ಸರಿಸಿದೆ, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಹೇಳಿದ್ದಾರೆ.
ನಾವು ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಡೋಣ. ಇದು ದೂರದ ಮತ್ತು ಕಠಿಣವಾದ ಹಾದಿ ಆದರೆ ಸುರಗಂದ ತುದಿಯಲ್ಲಿ ಬೆಳಕಿದೆ. ಕಾನೂನನ್ನು ನಿಮ್ಮ ಕೈಗೆ ತೆಗೆದುಕೊಳ್ಳಬೇಕು, ನ್ಯಾಯ ಸಿಗಲಿದೆ ಎಂದು ಪೋಸ್ಟ್ ಹಾಕಿದ್ದಾರೆ.
ದರ್ಶನ್ ಎಲ್ಲಿದ್ದಾರೆ?; ಸುಪ್ರೀಂಕೋರ್ಟ್ ನಟ ದರ್ಶನ್ ಜಾಮೀನು ರದ್ದುಗೊಳಿಸಿದೆ. ಆದರೆ ದರ್ಶನ್ ಬೆಂಗಳೂರಿನ ಆರ್.ಆರ್. ನಗರ ನಿವಾಸದಲ್ಲಿ ಇಲ್ಲ. ಮಾಹಿತಿಗಳ ಪ್ರಕಾರ ದರ್ಶನ್ ಬುಧವಾರ ರಾತ್ರಿ ಕೊಡಗಿನಲ್ಲಿವ ವಾಸ್ತವ್ಯ ಹೂಡಿದ್ದರು. ಇಂದು ಅವರು ತಮಿಳುನಾಡಿನಲ್ಲಿ ನಡೆಯುವ ಕುದುರೆಗಳ ಜಾತ್ರೆಯಲ್ಲಿ ಭಾಗಿಯಾಗಲಿ ತೆರಳಿದ್ದಾರೆ.
ಆರೋಪಿಗಳನ್ನು ಬಂಧಿಸುವಂತೆ ಕೋರ್ಟ್ ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಆರೋಪಿಗಳ ಹುಡಕಾಟ ಆರಂಭಿಸಿದ್ದಾರೆ. ಆರ್.ಆರ್. ನಗರದಲ್ಲಿರುವ ಪವಿತ್ರಾ ಗೌಡ ನಿವಾಸಕ್ಕೆ ಪೊಲೀಸರು ಆಗಮಿಸಿದ್ದಾರೆ. ಪವಿತ್ರಾ ಗೌಡ ಮನೆಗೆ ಆಕೆಯ ತಾಯಿ ಬಂದಿದ್ದು, ಮಾತುಕತೆ ನೆಡೆಸುತ್ತಿದ್ದಾರೆ.
ಪವಿತ್ರಾ ಗೌಡ, ದರ್ಶನ್, ಜಗದೀಶ್, ಅನು ಕುಮಾರ್, ಪ್ರದೋಶ್, ನಾಗರಾಜು, ಲಕ್ಷ್ಮಣ್ ಬಂಧಿಸಿ ಜೈಲಿಗೆ ಕಳಿಸಬೇಕಿದೆ. ಪೊಲೀಸರು ಈ ಪ್ರಕ್ರಿಯೆ ಕೈಗೊಳ್ಳಬೇಕಿದೆ. ನಟ ದರ್ಶನ್‌ರನ್ನು ಯಾವ ಜೈಲಿಗೆ ಕಳಿಸಲಾಗುತ್ತದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಈ ಹಿಂದೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್ ಹಾಕಿದ್ದಾಗ ರಾಜಾತಿಥ್ಯ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಅವರನ್ನು ಬಳ್ಳಾರಿಯ ಜೈಲಿಗೆ ಅವರನ್ನು ಕಳಿಸಲಾಗಿತ್ತು. ಹೈಕೋರ್ಟ್ ಜಾಮೀನು ನೀಡಿದ ಬಳಿಕ ಅವರು ಜೈಲಿನಿಂದ ಬಿಡುಗಡೆಗೊಂಡಿದ್ದರು.
ನಟ ದರ್ಶನ್ ಬಂಧನವಾದಾಗ ಐಪಿಎಸ್ ಅಧಿಕಾರಿ ಬಿ. ದಯಾನಂದ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದರು. ಈಗ ದರ್ಶನ್ ಜಾಮೀನು ರದ್ದುಗೊಂಡು ಅವರು ಜೈಲಿಗೆ ಹೋಗುವಾಗ ಕಾರಾಗೃಹ ಇಲಾಖೆಗೆ ಅವರು ಮುಖ್ಯಸ್ಥರಾಗಿದ್ದಾರೆ. ಆದ್ದರಿಂದ ದರ್ಶನ್ ಯಾವ ಜೈಲಿಗೆ ಹೋಗಬೇಕು? ಎಂದು ಬಿ. ದಯಾನಂದ ತೀರ್ಮಾನ ಮಾಡಬೇಕಿದೆ.