ನವಜಾತ ಶಿಶು ಮರಣ ಕರ್ನಾಟಕದಲ್ಲಿ 1000ಕ್ಕೆ 12

0
58

ಜಗತ್ತಿನ ಬೇರೆ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಶಿಶುಗಳ ಮರಣ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಶಿಶುಗಳ ಮರಣ ಪ್ರಮಾಣ ದತ್ತಾಂಶದ ಪ್ರಕಾರ, ಉತ್ತರಪ್ರದೇಶ, ಮಧ್ಯಪ್ರದೇಶ, ಮತ್ತು ಛತ್ತೀಸಗಢದಲ್ಲಿ ಪ್ರತಿ 1000 ಶಿಶುಗಳಿಗೆ 37ರಷ್ಟು ಶಿಶುಗಳು ಸಾವನ್ನಪ್ಪುತ್ತಿವೆ. ಇನ್ನು ದೇಶದಲ್ಲಿ ಶಿಶುಗಳ ಜನನಕ್ಕೆ ಅತ್ಯಂತ ಸುರಕ್ಷಿತ ರಾಜ್ಯವೆಂದು ಮಣಿಪುರ ಮತ್ತು ಗೋವಾವನ್ನು ಪರಿಗಣಿಸಲಾಗುತ್ತಿದೆ. ಹಾಗದರೇ ಕರ್ನಾಟಕದ ಕತೆಯೇನು? ದೇಶದ ಹಾಗೂ ಕರ್ನಾಟಕದ ಶಿಶುಗಳ ಮರಣ ಪ್ರಮಾಣ ಎಷ್ಟಿದೆ? ಶಿಶುಗಳ ಮರಣದ ಪ್ರಮುಖ ಕಾರಣಗಳೇನು ಎಂಬುದರ ಮಾಹಿತಿ ಇಲ್ಲಿದೆ…

ದೇಶದಲ್ಲಿ ಶಿಶುಗಳ ಮರಣ ಪ್ರಮಾಣ ಇಳಿಕೆ, ಮಣಿಪುರ ಅತಿ ಸುರಕ್ಷಿತ ರಾಜ್ಯ
ಕಳೆದ ಐದು ದಶಕಗಳಿಗೆ ಹೋಲಿಸಿದರೆ ಈ ಬಾರಿ ದೇಶದಲ್ಲಿ ಶಿಶುಗಳ ಮರಣ ಪ್ರಮಾಣ ಗಣಿನೀಯ ಇಳಿಕೆ ಕಂಡಿದೆ. ಮಾದರಿ ನೋಂದಣಿ ವ್ಯವಸ್ಥೆಯ ದತ್ತಾಂಶದ ಪ್ರಕಾರ, 2023ರಲ್ಲಿ ಶೇ.80ರಷ್ಟು ಶಿಶುಗಳ ಮರಣ ಪ್ರಮಾಣ ಇಳಿಕೆಯಾಗಿದೆ. 1971ರಲ್ಲಿ ಪ್ರತಿ 1000 ಶಿಶುಗಳಿಗೆ 129 ಶಿಶುಗಳು ಮರಣ ಹೊಂದುತ್ತಿದ್ದವು. ಇದೀಗ ಅದರ ಸಂಖ್ಯೆ 25ಕ್ಕೆ ಇಳಿದಿದೆ. ಮಣಿಪುರದಲ್ಲಿ ಶಿಶುಗಳ ಮರಣ ಪ್ರಮಾಣ 5ಕ್ಕೆ ಇಳಿದಿದ್ದು, ನವಜಾತ ಶಿಶುಗಳ ಜನನಕ್ಕೆ ಅತ್ಯಂತ ಸುರಕ್ಷಿತ ರಾಜ್ಯವೆಂದು ಪರಿಗಣಿಸಲಾಗುತ್ತದೆ.

ಉ.ಪ್ರ, ಮ.ಪ್ರ, ಛತ್ತೀಸಗಢದಲ್ಲಿ ಹೆಚ್ಚುತ್ತಿದೆ ಶಿಶುಗಳ ಮರಣ ಸಂಖ್ಯೆ
ದೇಶದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಒಟ್ಟಾರೆಯಾಗಿ ಶಿಶುಗಳ ಮರಣ ಪ್ರಯಾಣ ಇಳಿಕೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ. 44 ರಿಂದ ಶೇ. 28ಕ್ಕೆ ಇಳಿಕೆ ಕಂಡರೆ, ನಗರ ಪ್ರದೇಶಗಳಲ್ಲಿ ಶೇ. 27 ರಿಂದ ಶೇ. 18ಕ್ಕೆ ಇಳಿಕೆ ಕಂಡಿದೆ.
ಹೀಗಿದ್ದಾಗ್ಯೂ ಕಳೆದ ಮೂರು ವರ್ಷಗಳಲ್ಲಿ ಮಧ್ಯಪ್ರದೇಶ, ಉತ್ತರಪ್ರದೇಶ ಮತ್ತು ಛತ್ತೀಸಗಢದಲ್ಲಿ ನವಜಾತ ಶಿಶುಗಳ ಸಾವಿನ ಪ್ರಮಾಣ ಏರಿಕೆ ಕಂಡಿದೆ. ಪ್ರತಿ 1000 ಶಿಶುಗಳಿಗೆ 37 ಶಿಶುಗಳು ಸಾವನ್ನಪ್ಪುತ್ತಿವೆ.

ಕರ್ನಾಟಕದಲ್ಲಿ ಗಣನೀಯ ಇಳಿಕೆ…!
ಕಳೆದ ಮೂರು ವರ್ಷಗಳಲ್ಲಿ 8000ಕ್ಕೂ ಹೆಚ್ಚು ಶಿಶುಗಳು ಸಾವನ್ನಪ್ಪಿವೆ. ಜನನ ಸಮಯದ ಉಸಿರುಟ್ಟುವಿಕೆ, ಸೇರಿದಂತೆ ಹಲವು ಕಾರಣಗಳಿಗೆ ನವಜಾತ ಶಿಶುಗಳ ಮರಣ ಹೊಂದುತ್ತವೆ. ರಾಜ್ಯದಲ್ಲಿ ಶಿಶುಗಳ ಸಾವಿನ ಪ್ರಮಾಣ ಇಳಿಕೆಯಾಗುತ್ತಿದ್ದು, 1000 ಜೀವಂತ ಜನನಗಳಿಗೆ 12ಕ್ಕೆ ಇಳಿಕೆಯಾಗಿದೆ.

ನವಜಾತ ಶಿಶುಗಳ ಮರಣದ ಪ್ರಮುಖ ಕಾರಣ ಏನು?
ಅವಧಿ ಪೂರ್ವ ಜನನ
ಜನನ ಸಮಯದ ಉಸಿರುಗಟ್ಟುವಿಕೆ
ಶಿಶುವಿನ ಕಡಿಮೆ ತೂಕದ ತೊಂದರೆ
ನ್ಯುಮೋನಿಯಾ ಮತ್ತು ಸೆನ್ಸಿಸ್
ಜನ್ಮಜಾತ ಹೃದಯದ ಕಾಯಿಲೆ
ನರ ಸಂಬಂಧಿತ ದೋಷಗಳು.

ನವಜಾತ ಶಿಶುಗಳ ಮರಣ ಪ್ರಮಾಣ

  1. ಮಣಿಪುರ: 1000 ಜೀವಂತ ಜನನಗಳಿಗೆ 3 ಸಾವು.
  2. ಉತ್ತರಪ್ರದೇಶ, ಮಧ್ಯಪ್ರದೇಶ, ಛತ್ತೀಸಗಢ 1000 ಜೀವಂತ ಜನನಗಳಿಗೆ 37 ಸಾವು.
  3. ದೇಶದಲ್ಲಿ ಶಿಶುಗಳ ಮರಣ ಪ್ರಮಾಣ 1971-129, 2023-25 (1000 ಜೀವಂತ ಜನನಗಳಿಗೆ)

Previous articleಪಾಕ್‌ನಿಂದ ಪಾಕ್ ಮೇಲೇ ಸರ್ಜಿಕಲ್ ಸ್ಟ್ರೇಕ್: 30 ಬಲಿ
Next articleಜಿಎಸ್‌ಟಿ ಇಳಿಕೆ ಜಾರಿಗೆ ತರದ ಕಂಪನಿಗಳ ವಿರುದ್ಧ ಕಠಿಣ ಕ್ರಮ

LEAVE A REPLY

Please enter your comment!
Please enter your name here