IAS: ಶಿಕ್ಷಣ ಇಲಾಖೆ ಆಯುಕ್ತರಾಗಿ ವಿಕಾಸ್‌ ಕಿಶೋರ್‌ ಸುರಳ್ಕರ್‌ ನೇಮಕ

0
129

ಕರ್ನಾಟಕ ಸರ್ಕಾರ ಸೋಮವಾರ ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ವಿಕಾಸ್‌ ಕಿಶೋರ್‌ ಸುರಳ್ಕರ್‌ ಅವರನ್ನು ಶಿಕ್ಷಣ ಇಲಾಖೆ ನೂತನ ಆಯುಕ್ತರನ್ನಾಗಿ ನೇಮಕ ಮಾಡಿದೆ.

ಟಿ.ಮಹಾಂತೇಶ್ ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವೆಗಳು-1) ಐಎಎಸ್ ಅಧಿಕಾರಿಗಳ ವರ್ಗಾವಣೆ ಕುರಿತು ಆದೇಶವನ್ನು ಹೊರಡಿಸಿದ್ದಾರೆ.

ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾಗಿದ್ದ ಡಾ‌.ತ್ರಿಲೋಕ್ ಚಂದ್ರ ಕೆ.ವಿ. ಅವರನ್ನು ವರ್ಗಾವಣೆ ಮಾಡಲಾಗಿದೆ. ತತ್‌ಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ಅವರನ್ನು ಸರ್ಕಾರದ ಕಾರ್ಯದರ್ಶಿ, ಪ್ರವಾಸೋದ್ಯಮ ಇಲಾಖೆ, ಬೆಂಗಳೂರು ಹುದ್ದೆಗೆ ನೇಮಕ ಮಾಡಲಾಗಿದೆ. ಈ ಹುದ್ದೆಯಲ್ಲಿದ್ದ ಸಲ್ಮಾ ಕೆ. ಫಾಹಿಮ್ ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಗೊಂಡ ಅಧಿಕಾರಿಗಳು

  • ಡಾ.ತ್ರಿಲೋಕಚಂದ್ರ ಕೆ.ವಿ.(ಕೆಎನ್:2007). ಆಯುಕ್ತರು ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ತತ್‌ಕ್ಷಣದಿಂದ ವರ್ಗಾವಣೆ. ಮುಂದಿನ ಆದೇಶದ ತನಕ ಪ್ರವಾಸೋದ್ಯಮ ಇಲಾಖೆ ಸರ್ಕಾರದ ಕಾರ್ಯದರ್ಶಿಯಾಗಿ ನೇಮಕ. ಈ ಹುದ್ದೆಯಲ್ಲಿದ್ದ ಸಲ್ಮಾ ಕೆ. ಫಾಹಿಮ್ ವರ್ಗಾವಣೆ.
  • ಶಿವಕುಮಾರ್ ಕೆ.ಬಿ.(ಕೆಎನ್:2010), ಆಯುಕ್ತರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಹೊಣೆ ವ್ಯವಸ್ಥಾಪಕ ನಿರ್ದೇಶಕರು ಬಿಎಂಟಿಸಿ. ಈ ಹುದ್ದೆಯಲ್ಲಿದ್ದ ರಾಮಚಂದ್ರನ್ ಆರ್. ವರ್ಗಾವಣೆ.
  • ವಿಕಾಸ್‌ ಕಿಶೋರ್‌ ಸುರಳ್ಕರ್‌ (ಕೆಎನ್:2012) ವಿಶೇಷ ಆಯುಕ್ತರು (ಆರೋಗ್ಯ ಮತ್ತು ಶಿಕ್ಷಣ) ಗ್ರೇಟರ್ ಬೆಂಗಳೂರು ಆಥಾರಿಟಿ. ತತ್‌ಕ್ಷಣದಿಂದ ವರ್ಗಾವಣೆ, ಮುಂದಿನ ಆದೇಶದ ತನಕ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾಗಿ ನೇಮಕ. ಈ ಹುದ್ದೆಯಲ್ಲಿದ್ದ ಡಾ.ತ್ರಿಲೋಕಚಂದ್ರ ಕೆ.ವಿ. ವರ್ಗಾವಣೆ.
  • ವಿಕಾಸ್‌ ಕಿಶೋರ್‌ ಸುರಳ್ಕರ್‌ ಹೆಚ್ಚುವರಿ ಹೊಣೆ. ವಿಶೇಷ ಆಯುಕ್ತರು (ಆರೋಗ್ಯ ಮತ್ತು ಶಿಕ್ಷಣ) ಗ್ರೇಟರ್ ಬೆಂಗಳೂರು ಆಥಾರಿಟಿ.
Previous articleಮಕ್ಕಳ ಪಾಲಿನ “ಧ್ರುವ” ನಕ್ಷತ್ರ
Next articleಸುಪ್ರೀಂಕೋರ್ಟ್ ಸಿಜೆಐ ಮೇಲೆ ಶೂ ಎಸೆದು ಘೋಷಣೆ ಕೂಗಿದ ವಕೀಲ

LEAVE A REPLY

Please enter your comment!
Please enter your name here