ಕುಷ್ಟಗಿ: ಸ್ಥಳೀಯ ಬಸ್ ನಿಲ್ದಾಣದ ಕಾಂಪೌಂಡ್ ಹಿಂಭಾಗದಲ್ಲಿ ಐದರಿಂದ ಏಳು ತಿಂಗಳ ಒಳಗಿನ ಮೃತ ಹೆಣ್ಣು ಶಿಶು ಪತ್ತೆಯಾಗಿದೆ. ಒಂದು ಚೀಲದಲ್ಲಿ ಮುಚ್ಚಿ ಬಿಸಾಡಿ ಹೋಗಿದ್ದಾರೆ ಎನ್ನಲಾಗಿದೆ.
ಸಾರ್ವಜನಿಕರು ಹೆಡ್ ಕಾನ್‌ಸ್ಟೇಬಲ್ ತಾಯಪ್ಪ, ಪುರಸಭೆ ನೈರ್ಮಲ್ಯ ಅಧಿಕಾರಿ ಪ್ರಾಣೇಶ ಹಾಗೂ ಸಿಡಿಪಿಓ ಕಚೇರಿಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಯಿತು.
ಬಸ್ ನಿಲ್ದಾಣದ ಹಿಂಭಾಗದ ರಸ್ತೆಯಲ್ಲಿ ಹೆಣ್ಣು ಶಿಶು ಪತ್ತೆಯಾಗಿದ್ದು, ಈ ಬಗ್ಗೆ ನಮ್ಮ ಇಲಾಖೆ ವತಿಯಿಂದ ಮಹಜರ ಮಾಡಿ ಹೆಣ್ಣು ಶಿಶು ಪಾಲಕರ ಪತ್ತೆ ಹಚ್ಚುವಂತೆ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಕುಷ್ಟಗಿ ಸಿಡಿಪಿಒ ಯಲಮ್ಮ ಹಂಡಿ ತಿಳಿಸಿದರು.
ಕಳೆದ ಎರಡು ವರ್ಷಗಳ ಹಿಂದೆ ತಾಲೂಕಿನ ತಾವರಗೇರಾ ಪಟ್ಟಣದ ಚರಂಡಿಯಲ್ಲಿ, ಹನುಮನಾಳ ಭಾಗದಲ್ಲಿ ಹಾಗೂ ಕುಷ್ಟಗಿಯಲ್ಲಿ ಶಿಶುಗಳು ಪತ್ತೆಯಾಗಿದ್ದವು.