ಯಾರೂ ನೀರಿನಲ್ಲಿ ಕೊಚ್ಚಿ ಹೋಗಿಲ್ಲ

0
134

ಬಳ್ಳಾರಿ:ದೇವಸ್ಥಾನದ ಪೂಜೆಗೆ ತೆರಳಿದ್ದ ಪೂಜಾರಿ ಕುಟುಂಬಸ್ಥರ ರಕ್ಷಣೆಗೆ ತೆರಳಿದ್ದ ರಕ್ಷಣಾ ಪಡೆಯವರು ನೀರಿನಲ್ಲಿ ಕೊಚ್ಚಿ ಹೋದ ಘಟನೆ ನಡೆದ ಬಗ್ಗೆ ಸುಳ್ಳು ಸುದ್ದಿ ಹಬ್ಬಿದೆ.
ಸಿರಗುಪ್ಪ ತಾಲೂಕಿನ ಮುದೇನೂರು ಗ್ರಾಮದ ಶನೇಶ್ವರ ದೇವಸ್ಥಾನದ ಪೂಜಾರಿಗಳ ರಕ್ಷಣೆಗೆ ತೆರಳಿದ್ದ ಅಗ್ನಿ ಶಾಮಕ ದಳದ ಐದು ಜನ ಸಿಬ್ಬಂದಿ ನೀರಿನಲ್ಲಿ ಕೊಚ್ಚಿ ಹೋಗುವಾಗ ಬೋಟ್ ಪಲ್ಟಿಯಾಗಿ ವೇದಾವತಿ ನದಿಯ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದರು ಎಂದು ಹೇಳಲಾಗಿತ್ತು. ಆದರೆ, ಈಗ ಲಭ್ಯ ಅದ ಮಾಹಿತಿ ಪ್ರಕಾರ ಐವರು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೂಜಾರಿ ಕುಟುಂಬ ಸುರಕ್ಷಿತವಾಗಿದೆ ಎಂದು ತಿಳಿದುಬಂದಿದೆ.

Previous articleಪ್ರವಾಸಕ್ಕೆ ಬಂದಿದ್ದ ಬಸ್ ಪಲ್ಟಿ: 18 ಮಂದಿಗೆ ಗಾಯ
Next articleಶನಿವಾರವೇ ಜನೋತ್ಸವ ಕಾರ್ಯಕ್ರಮ : ಸಚಿವ ಡಾ.ಕೆ.ಸುಧಾಕರ್​..