ಟ್ರಂಪ್ ಹೊಸ ರೂಲ್: ಅಮೆರಿಕಕ್ಕೆ ಹೋಗೋದು ಈಗ ಇನ್ನೂ ಕಷ್ಟ!

0
56

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಅಧಿಕಾರಾವಧಿಯಲ್ಲಿದ್ದ ವಲಸೆ ಕಾನೂನಿನ ಸಾರ್ವಜನಿಕ ಶುಲ್ಕ ಮತ್ತೆ ಜಾರಿಗೆ ಬರುತ್ತಿದ್ದು ಸಾರ್ವಜನಿಕ ಶುಲ್ಕ ನಿಬಂಧನೆ ಯಡಿ ಹೊಸ ವೀಸಾ ಸ್ಕ್ರೀನಿಂಗ್ ನಿಯಮ ಜಾರಿಗೊಳಿಸುವಂತೆ ಜಗತ್ತಿನಾದ್ಯಂತದ ರಾಯಭಾರ ಕಚೇರಿಗಳಿಗೆ ವಿದೇಶಾಂಗ ಇಲಾಖೆ ಆದೇಶಿಸಿದೆ. ಈ ಹಿಂದಿನ ಜೋ ಬೈಡನ್ ಸರ್ಕಾರ ಈ ನಿಯಮ ಸಡಿಲಗೊಳಿಸಿದ್ದರಿಂದ ಲಕ್ಷಾಂತರ ಮಂದಿ ವಲಸಿಗರಿಗೆ ಅನುಕೂಲವಾಗಿತ್ತು.

ಸಾರ್ವಜನಿಕ ಶುಲ್ಕ ನಿಯಮದಡಿ ಯಾರೇ ಅರ್ಜಿದಾರರಿಗೆ ವೀಸಾ ಅಥವಾ ಕಾಯಂ ವಾಸದ ಅವಕಾಶ ನಿರಾಕರಿಸಬಹುದು. ಸ್ವಾವಲಂಬನೆಯು ಅಮೆರಿಕದ ವಲಸೆ ನೀತಿಯ ದೀರ್ಘಕಾಲದ ತತ್ತ್ವವಾಗಿದೆ. ಸಾರ್ವಜನಿಕರ ಪ್ರವೇಶಾನುಮತಿಗೆ ನಮ್ಮ 100 ವರ್ಷಗಳಿಗೂ ಹೆಚ್ಚು ಕಾಲದ ವಲಸೆ ಕಾನೂನನೇ ಆಧಾರವಾಗಿದೆ ಎಂದು ಅಮೆರಿಕ ಆಡಳಿತ ಹೇಳಿಕೊಂಡಿದೆ.

ಆರೋಗ್ಯ, ವಯಸ್ಸು, ಇಂಗ್ಲಿಷ್ ಪ್ರಾವೀಣ್ಯತೆ, ಹಣಕಾಸು ಹಾಗೂ ವೈದ್ಯಕೀಯ ನೆರವು ಹಾಗೂ ಆರೈಕೆಯ ದೀರ್ಘಕಾಲೀನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಪ್ರಯೋಜನಗಳನ್ನು ಅವಲಂಬಿಸಿರುವ ಅರ್ಜಿದಾರರಿಗೆ ವೀಸಾ ನಿರಾಕರಿಸುವಂತೆ ಅಮೆರಿಕ ಆಡಳಿತವು ರಾಯಭಾರ ಕಚೇರಿಗಳ ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದೆ.

ಅರ್ಜಿ ಪರಿಶೀಲನೆಯ ಸಮಯದಲ್ಲಿ ವೀಸಾ ಅರ್ಜಿ, ವೈದ್ಯಕೀಯ ವರದಿ, ಬೆಂಬಲದ ಅಫಿಡವಿಟ್ ಮತ್ತು ಪರಿಶೀಲನೆಯ ಸಮಯದಲ್ಲಿ ಬಹಿರಂಗಗೊಂಡ ಯಾವುದೇ ಮಾಹಿತಿ ಒಳಗೊಂಡಂತೆ ಎಲ್ಲಾ ಅಂಶಗಳನ್ನು ಪರಿಶೀಲಿಸಬೇಕು ಎಂದೂ ಸೂಚಿಸಿದೆ. ಸರ್ಕಾರದ ನಗದು ನೆರವು ಅಥವಾ ಸಾಂಸ್ಥೀಕರಣದ ಯಾವುದೇ ಹಿಂದಿನ ಬಳಕೆಯೂ ನಿರಾಕರಣೆಗೆ ಆಧಾರವಾಗಬಹುದು ಎಂದೂ ಸ್ಪಷ್ಟಪಡಿಸಿದೆ.

ಏನಿದುಹೊಸ ನಿಯಮ, ಇದ್ರಿಂದ ಯಾರಿಗೆ ನಷ್ಟ?: ಅಮೆರಿಕ ಸರ್ಕಾರದ ವೆಚ್ಚಕ್ಕೆ ಕಾರಣರಾಗಿರುವಂತಹ ಅಥವಾ ಹೊಣೆಗಾರರಾಗುವಂತಹವರಿಗೆ ಅವರ ಅಂಗವೈಕಲ್ಯ ಅಥವಾ ಹಣಕಾಸು ಸಂಪನ್ಮೂಲಗಳ ಕೊರತೆಯ ಆಧಾರದಲ್ಲಿ ವೀಸಾ ಅಥವಾ ಅಮೆರಿಕ ದೇಶದ ಪ್ರವೇಶವನ್ನು ನಿರಾಕರಿಸಬಹುದು. ಇದರ ಹೊಡೆದ ಲಕ್ಷಾಂತರ ಜನರಿಗೆ ಬೀಳಬಹುದು.

Previous articleಗೃಹ ಉತ್ಪನ್ನಗಳಿಂದಲೇ ಯಶಸ್ವಿ ಉದ್ದಿಮೆ ಕಟ್ಟಿದ ಕರಾವಳಿ ಮಹಿಳೆ
Next articleಮುಂದವರಿದ ಕಬ್ಬು ಬೆಳೆಗಾರರ ಹೋರಾಟ: ಕಾರ್ಖಾನೆ ಪ್ರತಿನಿಧಿಗಳ ತುರ್ತು ಸಭೆ ನಡೆಸಿದ ಡಿಸಿ

LEAVE A REPLY

Please enter your comment!
Please enter your name here