ದುಬೈ ಏರ್‌ಶೋದಲ್ಲಿ ತೇಜಸ್ ಯುದ್ಧವಿಮಾನ ದುರಂತ

0
47

ದುಬೈ: ನಡೆಯುತ್ತಿರುವ Dubai Airshow 2025 ನಲ್ಲಿ ಭಾರತೀಯ ಏರ್‌ಕ್ರಾಫ್ಟ್ ಅಭಿವೃದ್ಧಿ ಸಾಮರ್ಥ್ಯವನ್ನು ತೋರಿಕೆ ಮಾಡಲು ಬಳಸಲಾಗುತ್ತಿದ್ದ ಎಚ್‌ಎಎಲ್ ತೇಜಸ್ ಯುದ್ಧವಿಮಾನ ಶುಕ್ರವಾರ ಹಾರಾಟದ ವೇಳೆ ಅಪಘಾತಕ್ಕೀಡಾಗಿದೆ. ಈ ಘಟನೆ ಸ್ಥಳೀಯ ಸಮಯದ ಮಧ್ಯಾಹ್ನ 2:10ರ ಸುಮಾರಿಗೆ ನಡೆದಿದೆ.

ಪ್ರದರ್ಶನಕ್ಕಾಗಿ ವಿಮಾನ ಗಗನಕ್ಕೆ ಏರಿದ ಸ್ವಲ್ಪ ಸಮಯದಲ್ಲೇ ನಿಯಂತ್ರಣ ತಪ್ಪಿ ನೆಲಕ್ಕೆ ಡಿಕ್ಕಿ ಹೊಡೆದಿದ್ದು, ಕಣ್ಮುಂದೆ ಸಂಭವಿಸಿದ ಈ ಘಟನೆ ಪ್ರದರ್ಶನ ವೀಕ್ಷಿಸುತ್ತಿದ್ದ ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಜನರನ್ನು ಬೆಚ್ಚಿಬೀಳುವಂತೆ ಮಾಡಿತು. ವಿಮಾನ ಪತನವಾದ ತಕ್ಷಣ ಸ್ಥಳದಲ್ಲಿ ದಟ್ಟವಾದ ಕಪ್ಪು ಹೊಗೆ ಏರಿ, ಪ್ರದರ್ಶನ ಪ್ರದೇಶವನ್ನು ಆವರಿಸಿತು.

ಘಟನೆಯ ನಂತರ Indian Air Force (IAF) ಅಧಿಕೃತವಾಗಿ ಘಟನೆ ದೃಢಪಡಿಸಿದ್ದು, ಪ್ರಾಥಮಿಕ ತನಿಖೆ ನಡೆಯುತ್ತಿದೆ ಎಂದು ತಿಳಿಸಿದೆ.

IAF : “Dubai Air Show 2025ರಲ್ಲಿ ಐಎಎಫ್ ಬಳಸುತ್ತಿದ್ದ HAL Tejas aircraft ಅಪಘಾತಕ್ಕೀಡಾಗಿದೆ. ಇನ್ನಷ್ಟು ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ. ಶೀಘ್ರದಲ್ಲೇ ವಿವರಗಳನ್ನು ಹಂಚಿಕೊಳ್ಳಲಾಗುತ್ತದೆ.” ವಿಮಾನದಲ್ಲಿ ಇದ್ದ ಪೈಲಟ್‍‌ಗೆ ಅಪಾಯ ಸಂಭವಿಸಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಸಾಕ್ಷಿಗಳು ಹೇಳುವ ಪ್ರಕಾರ ವಿಮಾನ ನೆಲಕ್ಕೆ ಬಿದ್ದ ಮೊದಲು ಪೈಲಟ್‌ ತಮ್ಮ eject capsule ಬಳಸಿರುವ ಸಾಧ್ಯತೆ ಇದೆ, ಆದರೆ ಇದನ್ನು ಅಧಿಕೃತವಾಗಿ ಇನ್ನೂ ದೃಢಪಡಿಸಲಾಗಿಲ್ಲ.

Previous articleMovie Review: ಕರ್ಣನ ಮತ್ತೊಂದು ಅವತಾರ ರಾಧೇಯ
Next articleನವೆಂಬರ್ ಕ್ರಾಂತಿ ಊಹಾಪೋಹ: ಒಗ್ಗಟ್ಟಿನ ಮಂತ್ರ ಜಪಿಸಿದ ಡಿಕೆಶಿ, ಸಿದ್ದು ಪ್ರತಿಕ್ರಿಯೆ ಏನು?

LEAVE A REPLY

Please enter your comment!
Please enter your name here