ಗೋರಖ್ ಪುರ: ಉತ್ತರಪ್ರದೇಶದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ವಂದೇ ಮಾತರಂ ಗೀತೆ ಹಾಡುವುದು ಕಡ್ಡಾಯ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೋಮವಾರ ಘೋಷಿಸಿರುವುದು ರಾಜಕೀಯ ಹಾಗೂ ಮತೀಯ ವಲಯದಲ್ಲಿ ವಿವಾದಕ್ಕೆ ಕಾರಣವಾಗಿದೆ.
ಗೋರಖ್ ಪುರದಲ್ಲಿ ಏಕತಾ ಯಾತ್ರೆ ಹಾಗೂ ವಂದೇ ಮಾತರಂ ಗೀತ ಗಾಯನ ಕಾರ್ಯಕ್ರಮದಲ್ಲಿ ಯೋಗಿ ಮಾತನಾಡಿ, ಭಾರತಮಾತೆ ಹಾಗೂ ಮಾತೃಭೂಮಿ ಬಗ್ಗೆ ವಿದ್ಯಾರ್ಥಿಗಳಲ್ಲಿ ಹೆಮ್ಮೆ ಹಾಗೂ ಗೌರವ ಮೂಡಿಸುವ ಉದ್ದೇಶದಿಂದ ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ವಂದೇ ಮಾತರಂ ಹಾಡುವುದನ್ನು ಕಡ್ಡಾಯ ಮಾಡುತ್ತಿದ್ದೇವೆ ಎಂದರು.
ಆದರೆ ಈ ಸಂಬಂಧ ರಾಜ್ಯಸರ್ಕಾರದ ಆದೇಶ ಇನ್ನೂ ಹೊರಬಿದ್ದಿಲ್ಲ. ಅಲ್ಲದೆ, ಶಿಕ್ಷಣ ಸಂಸ್ಥೆಗಳಲ್ಲಿ ಯಾವಾಗ ಇದನ್ನು ಜಾರಿಗೆ ತರಲಾಗುತ್ತಿದೆ ಎಂಬುದರ ಮಾಹಿತಿಯೂ ಇಲ್ಲ. ಹಾಡುವುದಕ್ಕೆ ಅವಕಾಶ ಮಾಡಿಕೊಡುವುದರ ಬದಲಿಗೆ ಶಾಲೆಗಳಿಂದಲೇ ಅವರನ್ನು ವಾಪಸ್ ಕರೆಸಿಕೊಳ್ಳಬೇಕು
ಎಂದು ಜಮಿಯಾತ್ ಉಲೇಮಾ ಇ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಮೌಲಾನಾ ಹಲೀಮ್ ಉಲ್ಲಾ ಕಾಸ್ಮಿ ಒತ್ತಾಯಿಸಿದರು. ನಾವು ಮುಸ್ಲಿಮರು, ಈ ದೇಶದ ಸಂವಿಧಾನವು ನಮ್ಮ ಧರ್ಮ ಆಚರಿಸುವ ಸ್ವಾತಂತ್ರ್ಯ ನೀಡಿದೆ. ನಮ್ಮ ನಂಬಿಕೆ ವಿರುದ್ಧ ಏನಾದರೂ ಹೇರಿದರೆ ನಮ್ಮ ಸಂವಿಧಾನ ಅದನ್ನು ಸ್ವೀಕರಿಸುವುದಿಲ್ಲ.
ಆದ್ದರಿಂದ ಯಾವುದೇ ಸಂದರ್ಭಗಳಲ್ಲೂ ನಮ್ಮ ಧರ್ಮಕ್ಕೆ ವಿರೋಧವಾಗಿರುವುದನ್ನು ನಾವು ಒಪ್ಪುವುದಿಲ್ಲ ಎಂದಿದ್ದಾರೆ. ವಂದೇ ಮಾತರಂ ಗೀತೆಯನ್ನು ಕಡ್ಡಾಯವಾಗಿ ಹಾಡುವುದು ಇಸ್ಲಾಮಿನ ತತ್ತ್ವಗಳಿಗೆ ವಿರೋಧ ಎಂದು ಕಾಸ್ತ್ರಿ ವಾದಿಸಿದರು.
ನಾವು ಅಲ್ಲಾಹನನ್ನು ಪೂಜಿಸುವ ಹೊರತು ಬೇರೇನನ್ನೂ ಪೂಜಿಸುವುದಿಲ್ಲ. ದೇಶದ ಮಟ್ಟಿಗೆ ಹೇಳುವುದಾದರೆ ಮುಸ್ಲಿಮರು ರಾಷ್ಟ್ರಕ್ಕೆ ಗೌರವ ತೋರಿಸುವುದಕ್ಕೆ ಎಂದಿಗೂ ಹಿಂದುಳಿದಿಲ್ಲ. ವಂದೇ ಮಾತರಂ ಹೆಸರಲ್ಲಿ ಏನು ನಡೆಯುತ್ತಿದೆಯೋ ಆ ಮೂಲಕ ಮುಸ್ಲಿಮರನ್ನು ಹಿಂಸಿಸಲಾಗುತ್ತಿದೆ ಎಂದರು.
ಸಾಂವಿಧಾನಿಕ ಹಕ್ಕಿನ ಉಲ್ಲಂಘನೆ: ಮುಖ್ಯಮಂತ್ರಿ ಯೋಗಿಯವರ ಘೋಷಣೆ ಹೊರಬಿದ್ದ ಕೆಲವೇ ತಾಸುಗಳಲ್ಲಿ ಮುಸ್ಲಿಮರ ಹಲವಾರು ಮತೀಯ ನಾಯಕರು ಅದಕ್ಕೆ ವಿರೋಧ ವ್ಯಕ್ತಪಡಿಸಿದರು.
ಈ ತೀರ್ಮಾನದಿಂದ ತಮ್ಮ ನಂಬಿಕೆ ಆಚರಿಸುವ ಸಾಂವಿಧಾನಿಕ ಹಕ್ಕು ಉಲ್ಲಂಘಿಸಿದಂತಾಗಿದೆ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಸ್ಲಿಮ್ ಹೆತ್ತವರು ತಮ್ಮ ಮಕ್ಕಳಿಗೆ ಶಾಲೆಯಲ್ಲಿ ವಂದೇ ಮಾತರಂ
ಸೂರ್ಯನಮಸ್ಕಾರ ವಿವಾದ: ಉತ್ತರಪ್ರದೇಶದಲ್ಲಿ ಈ ಹಿಂದೆ ಎಲ್ಲಾ ಶಾಲಾ ಮಕ್ಕಳು ಸೂರ್ಯನಮಸ್ಕಾರ ಮಾಡುವುದನ್ನು ಕಡ್ಡಾಯಗೊಳಿಸಿದಾಗ ಮೌಲಾನಾ ಅಲಿ ಮಿಯಾನ್ ನದ್ವಿ ವಿರೋಧಿಸಿದ್ದರು. ಎಲ್ಲಾ ಮುಸ್ಲಿಮರು ಶಾಲೆಗಳಿಂದ ತಮ್ಮ ಮಕ್ಕಳು ವಾಪಸ್ ಕರೆಸಿಕೊಳ್ಳುತ್ತಾರೆ ಎಂದು ಬೆದರಿಕೆ ಹಾಕಿದ್ದರು.
ಆಗ ಯೋಗಿ ಸರ್ಕಾರ ಸೂರ್ಯನಮಸ್ಕಾರ ಮಾಡುವುದು ಕಡ್ಡಾಯವಲ್ಲ. ಮಕ್ಕಳು ಅಪೇಕ್ಷಿಸಿದರೆ ಮಾತ್ರ ಅದನ್ನು ಮಾಡಬಹುದೆಂದು ತಮ್ಮ ಆದೇಶದ ನಿಲುವು ಸಡಿಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
























