ನೌಗಮ್ ಪೊಲೀಸ್ ಠಾಣೆಯಲ್ಲಿ ಭೀಕರ ಸ್ಫೋಟ – 7 ಸಾವು

0
56

ಜಮ್ಮು–ಕಾಶ್ಮೀರ, ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ದಕ್ಷಿಣ ಭಾಗದಲ್ಲಿರುವ ನೌಗಮ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಭೀಕರ ಸ್ಫೋಟ ದೇಶವನ್ನೇ ಬೆಚ್ಚಿಬೀಳಿಸಿದೆ. ವಶಪಡಿಸಿಟ್ಟಿದ್ದ ಸ್ಪೋಟಕ ವಸ್ತುಗಳನ್ನು ಪರಿಶೀಲಿಸುವ ವೇಳೆ ದಾಸ್ತಾನು ಭಾಗದಲ್ಲಿ ಸಂಭವಿಸಿದ ಈ ಸ್ಫೋಟದಲ್ಲಿ 6 ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 27ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿ ತಿಳಿಸಿದೆ.

ಘಟನೆ ಹೇಗೆ ಸಂಭವಿಸಿತು?: ಪೊಲೀಸ್ ಮೂಲಗಳ ಪ್ರಕಾರ, ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದ್ದ ಶಂಕಿತ ಡಾ. ಮುಜಮ್ಮಿಲ್ ಗನಿ ಅವರ ಬಾಡಿಗೆ ಮನೆಯಿಂದ ಶುಕ್ರವಾರ ರಾತ್ರಿ 360 ಕಿಲೋಗ್ರಾಂ ತೂಕದ ಸ್ಪೋಟಕಗಳನ್ನು ವಶಪಡಿಸಿಕೊಂಡಿದ್ದರು. ಈ ವಸ್ತುಗಳನ್ನು ನೌಗಮ್ ಠಾಣೆಗೆ ತರಲಾಗಿತ್ತು. ಬಳಿಕ ರಾತ್ರಿ ವಿಧಿವಿಜ್ಞಾನ (FSL) ತಂಡ ಹಾಗೂ ಪೊಲೀಸರು ಒಟ್ಟಿಗೆ ಈ ವಸ್ತುಗಳನ್ನು ಪರಿಶೀಲಿಸುತ್ತಿದ್ದ ವೇಳೆಯಲ್ಲೇ ಭಾರೀ ಸ್ಫೋಟ ಸಂಭವಿಸಿದೆ.

ಸ್ಫೋಟದ ಶಕ್ತಿ ಅಷ್ಟು ಭಯಾನಕವಾಗಿತ್ತು ಎಂಬುದಾಗಿ ಮೂಲಗಳು ಹೇಳಿದ್ದು, ಕೆಲವು ಮೃತದೇಹಗಳನ್ನು ಗುರುತಿಸಲಾಗದ ಸ್ಥಿತಿಯಲ್ಲಿ ಠಾಣೆಯ ಅವಶೇಷಗಳ ನಡುವಿನಿಂದ ಪತ್ತೆಹಚ್ಚಲಾಗಿದೆ. ನಂತರ ಅವನ್ನು ಶ್ರೀನಗರ ಪೊಲೀಸ್ ಕಂಟ್ರೋಲ್ ರೂಮ್‌ಗೆ ಸಾಗಿಸಲಾಗಿದೆ.

ಗಾಯಗೊಂಡವರ ಸ್ಥಿತಿ ಗಂಭೀರ: ಸ್ಫೋಟದಲ್ಲಿ ಗಾಯಗೊಂಡ 24 ಮಂದಿ ಪೊಲೀಸ್ ಸಿಬ್ಬಂದಿ, ಹಾಗೂ 3 ಸಾಮಾನ್ಯ ನಾಗರಿಕರು ಶ್ರೀನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಐದು ಮಂದಿ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

“ಸ್ಫೋಟಕ ವಸ್ತುಗಳನ್ನು ಪರೀಕ್ಷಿಸುವ ಸಮಯದಲ್ಲೇ ಅನಾಹುತ ಸಂಭವಿಸಿದೆ. ಇದು ತಾಂತ್ರಿಕ ತಪ್ಪೋ? ಅಥವಾ ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದ ಮತ್ತೊಂದು ಸಂಚೋ? ಎಂಬುದನ್ನು ತನಿಖೆ ಬಳಿಕ ತಿಳಿಯಲಿದೆ. ಈ ಘಟನೆಯ ನಂತರ ಶ್ರೀನಗರದಲ್ಲಿ ಭದ್ರತಾ ಜಾಗೃತಿ ಹೆಚ್ಚಳ ಮಾಡಲಾಗಿದ್ದು. ಶ್ರೀನಗರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದು, ರಾಷ್ಟ್ರೀಯ ಭದ್ರತಾ ದಳ (NSG) ಮತ್ತು ಬಾಂಬ್ ಡಿಸ್ಪೋಸಲ್ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ.

Previous articleMovie Review: ‘ಗತ’ಕಾಲದ ಕಥೆಗೆ ‘ವೈಭವ’ದ ಮೆರುಗು
Next articleಮಂಗಳೂರು: ಭೀಕರ ಅಪಘಾತ – 3 ಸಾವು, 6 ಮಂದಿಗೆ ಗಂಭೀರ ಗಾಯ

LEAVE A REPLY

Please enter your comment!
Please enter your name here