ಫೋಟೋಗಾಗಿ ವಿದೇಶಿ ಮಹಿಳೆಯರಿಗೆ ಕಿರುಕುಳ: ಮೂವರ ಬಂಧನ

0
11

ಪಣಜಿ: ಉತ್ತರ ಗೋವಾದ ಬೀಚ್‌ನಲ್ಲಿ ಇಬ್ಬರು ವಿದೇಶಿ ಮಹಿಳೆಯರಿಗೆ ತಮ್ಮ ಜತೆ ಫೋಟೋ ತೆಗೆಸಿಕೊಳ್ಳುವಂತೆ ಕಿರುಕುಳ ನೀಡಿದ ಕರ್ನಾಟಕದ ಮೂವರು ಪ್ರವಾಸಿಗರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.

ಕೆಲ ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೊವೊಂದು ವೈರಲ್ ಆಗಿತ್ತು. ಗೋವಾ ಬೀಚ್‌ನಲ್ಲಿ ಕೆಲ ದೇಶೀಯ ಪ್ರವಾಸಿಗರು ವಿದೇಶಿ ಮಹಿಳೆಯರಿಗೆ ಫೋಟೊ ತೆಗೆಸಿಕೊಳ್ಳಲು ಒತ್ತಡ ಹೇರುತ್ತಿದ್ದರು. ವಿದೇಶಿ ಮಹಿಳೆಯರ ಕೈ ಹಿಡಿದು ಫೋಟೋ ತೆಗೆದುಕೊಳ್ಳಲು ಯತ್ನಿಸಿದ್ದರು. ಈ ಮಹಿಳೆಯರು ಅಸ್ವಸ್ಥರಾದ ಸಂದರ್ಭದಲ್ಲಿ ಅವರ ಭುಜದ ಮೇಲೆ ಕೈ ಹಾಕಿ ಫೋಟೋ ತೆಗೆಸಿಕೊಂಡಿದ್ದರು. ಈ ಘಟನೆಯಿಂದಾಗಿ ಗೋವಾದಲ್ಲಿ ಮಹಿಳಾ ಪ್ರವಾಸಿಗರ ಸುರಕ್ಷತೆಯ ಪ್ರಶ್ನೆ ನಿರ್ಮಾಣವಾಗಿತ್ತು.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಗೋವಾ ಪೊಲೀಸರು ಸ್ವತಃ ತಾವೇ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ತನಿಖೆ ನಡೆಸಿ ಕರ್ನಾಟಕದ ಮೈಸೂರು ಹಾಗೂ ಬೆಂಗಳೂರಿನ ಕಾರ್ತಿಕ್ ಬಿ.ಆರ್ (28), ಬಿ.ಎನ್. ಸಂತೋಷ(33), ರವಿ ಬಿ.ಎನ್. ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Previous articleಭಯೋತ್ಪಾದಕರ ಮನೆಗೆ ಬುಲ್ಡೋಜರ್ ನುಗ್ಗಿಸಿ

LEAVE A REPLY

Please enter your comment!
Please enter your name here