ತಾಂತ್ರಿಕ ದೋಷ: ಅನೇಕ ಜಾಗತಿಕ ವೆಬ್‌ಸೈಟ್‌ಗಳು ಸ್ಥಗಿತ

0
51

ಜಗತ್ತಿನಾದ್ಯಂತ ಜನಪ್ರಿಯ ವೆಬ್‌ಸೈಟ್‌ಗಳಲ್ಲಿ ಏಕಾಏಕಿ ದೋಷ ಸಂದೇಶಗಳು ಕಾಣಿಸಿಕೊಳ್ಳುತ್ತಿದ್ದು, ಲಕ್ಷಾಂತರ ಬಳಕೆದಾರರು ಸೇವೆ ಪಡೆಯದೆ ಪರದಾಡುತ್ತಿದ್ದಾರೆ. ಈ ತಾಂತ್ರಿಕ ಅಡಚಣೆಗೆ ಇಂಟರ್‌ನೆಟ್ ಸುರಕ್ಷತೆ ಮತ್ತು ಮೂಲಸೌಕರ್ಯ ಸೇವೆಗಳನ್ನು ಒದಗಿಸುವ Cloudflare ಕಂಪನಿ ಕಾರಣವಾಗಿರುವುದನ್ನು ಸಂಸ್ಥೆಯೇ ದೃಢಪಡಿಸಿದೆ.

ದೋಷ ಸಂದೇಶಗಳಿಂದ ಬಳಕೆದಾರರಿಗೆ ತೊಂದರೆಯಾಗಿದ್ದು X (ಟ್ವಿಟರ್), Gemini, Perplexity AI ಸೇರಿದಂತೆ ಹಲವಾರು ಪ್ರಮುಖ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲಿ ಬಳಕೆದಾರರು ಒಂದೇ ರೀತಿಯ ದೋಷ ಸಂದೇಶಗಳನ್ನು ಕಂಡುಬರುತ್ತಿವೆ — ವಿಶೇಷವಾಗಿ: Cloudflare 500 errors, Internal server errors. API failures. Dashboard loading failures ಎಂಬ ಸಂದೇಶಗಳು ಬರುತ್ತಿವೆ.

ಅದರ ಪರಿಣಾಮವಾಗಿ ಲಾಗಿನ್ ಆಗಲು ಸಾಧ್ಯವಾಗದಿರುವುದು ಹಾಗೂ ಹೊಸ ಪೋಸ್ಟ್‌ಗಳು ಲೋಡ್ ಆಗದಿರುವುದು ಮತ್ತು ಅಪ್‌ಗಳನ್ನು ತೆರೆಯಲು ಸಮಸ್ಯೆ ಕಂಡು ಬಂದಿವೆ. ವೆಬ್‌ಸೈಟ್‌ಗಳು ಸಂಪೂರ್ಣವಾಗಿ ಡೌನ್ ಆಗಿರುವುದು ಇವೆಲ್ಲವು ಜಾಗತಿಕ ಇಂಟರ್‌ನೆಟ್‌ ಬಳಕೆದಾರರ ನಡುವೆ ಗೊಂದಲ ಮತ್ತು ಆತಂಕವನ್ನು ಉಂಟುಮಾಡಿವೆ.

ಕ್ಲೌಡ್‌ಫ್ಲೇರ್ ಪ್ರತಿಕ್ರಿಯೆ: ಕ್ಲೌಡ್‌ಫ್ಲೇರ್ ತನ್ನ ಸ್ಥಿತಿ ಪುಟದಲ್ಲಿ ಪ್ರಕಟಣೆ ಹೊರಡಿಸಿದ್ದು ಹೀಗಿದೆ: “Cloudflare is aware of an issue impacting multiple customers causing widespread 500 errors and failure of Cloudflare Dashboard & API. We are investigating and working to understand full impact.” ಸ್ಥಾನಿಯ ಸಮಯದ ಪ್ರಕಾರ ಕಂಪನಿ ಇನ್ನೂ ತನಿಖೆ ಮುಂದುವರೆಸಿದ್ದು, ಶೀಘ್ರದಲ್ಲೇ ಪರಿಹಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ಕೆಲ ಹೊತ್ತಿನಲ್ಲಿ ವೆಬ್‌ಸೈಟ್‌ ದೋಷ ನಿವಾರಣೆಯಿಂದ ಸಹಜ ಸ್ಥಿತಿಗೆ ಮರಳುತ್ತಿವೆ.

Previous articleಧಾರವಾಡದಲ್ಲಿ AI – ಕ್ವಾಂಟಮ್ ಕಂಪ್ಯೂಟಿಂಗ್‌ Excellence Centre ಸ್ಥಾಪಿಸಲು ತೀರ್ಮಾನ
Next articleಬೆಂಗಳೂರಿಗೆ 2ನೇ ಏರ್‌ಪೋರ್ಟ್: ದಕ್ಷಿಣ ಭಾಗದಲ್ಲೇ ಸ್ಥಳ ಫೈನಲ್? ಡಿಕೆಶಿ ಕೊಟ್ಟ ಬಿಗ್ ಅಪ್‌ಡೇಟ್!

LEAVE A REPLY

Please enter your comment!
Please enter your name here