ದೇಶದಲ್ಲಿ ನಿರಂತರ ಏರುಗತಿಯಲ್ಲಿದ್ದ ನಿರುದ್ಯೋಗ ದರವು ಆಗಸ್ಟ್‌ನಲ್ಲಿ ಇಳಿಕೆ ಕಂಡಿದೆ. ಇತ್ತಿಚೆಗೆ ಕೇಂದ್ರ ಸರ್ಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯಲ್ಲಿ ನಿರುದ್ಯೋಗ ಪ್ರಮಾಣ ಆಗಸ್ಟ್‌ನಲ್ಲಿ ಶೇ 5.1ಕ್ಕೆ ತಗ್ಗಿದೆ. ಇದೇ ಮೊದಲ ಬಾರಿಗೆ ವರದಿ ಬಿಡುಗಡೆ ಮಾಡಿರುವ ಸಚಿವಾಲಯದ ದತ್ತಾಂಶದ ಪ್ರಕಾರ, ಜೂನ್ ತಿಂಗಳಲ್ಲಿ ಶೇ. 5.6ರಷ್ಟು ಉದ್ಯೋಗ ದರವಿತ್ತು. ಜುಲೈನಲ್ಲಿ ಶೇ 5.2ರಷ್ಟಿದ್ದು ಕ್ರಮೇಣವಾಗಿ ಈ ತಿಂಗಳು ಆಗಸ್ಟ್‌ನಲ್ಲಿ ಶೇ. 5.1ಕ್ಕೆ ಇಳಿದಿದೆ. ಹಾಗಾದ್ರೆ ನಗರ ಮತ್ತು ಗ್ರಾಮೀಣ ಪ್ರದೇಶಲ್ಲಿ ನಿರುದ್ಯೋಗ ದರ ಎಷ್ಟಿದೆ? ಪುರುಷ ಮತ್ತು ಮಹಿಳೆಯರ ನಿರುದ್ಯೋಗ ಪ್ರಮಾಣ ಎಷ್ಟು? ಎಂಬುದರ ವಿವರ ಇಲ್ಲಿದೆ…
ಪುರುಷರ ನಿರುದ್ಯೋಗ ದರ ಐದು ತಿಂಗಳಲ್ಲೇ ಕನಿಷ್ಠ ಮಟ್ಟ: 15 ವರ್ಷ ಮೇಲ್ಪಟ್ಟ ಪುರುಷರ ನಿರುದ್ಯೋಗ ದರವು ಆಗಸ್ಟ್‌ನಲ್ಲಿ ಶೇ. 5ರಷ್ಟು ಇಳಿದಿದೆ. ಇದು ಏಪ್ರಿಲ್ ನಂತರ ಕನಿಷ್ಟ ಮಟ್ಟವಾಗಿದೆ. ನಗರ ಪ್ರದೇಶಗಳಲ್ಲಿ ಪುರುಷರ ನಿರುದ್ಯೋಗ ಪ್ರಮಾಣ ಜುಲೈನಲ್ಲಿ ಶೇ. 6.6ರಷ್ಟಿದ್ದು, ಆಗಸ್ಟ್‌ನಲ್ಲಿ ಶೇ. 5.9ಕ್ಕೆ ಇಳಿದಿದೆ. ಇನ್ನು ಗ್ರಾಮೀಣ ಪ್ರದೇಶದಲ್ಲೂ ಕಳೆದ 4 ತಿಂಗಳ ನಂತರ ನಿರುದ್ಯೋಗ ದರ ತಗ್ಗಿದ್ದು ಆಗಸ್ಟ್‌ನಲ್ಲಿ ಶೇ. 4.5ಕ್ಕೆ ಇಳಿದಿದೆ.
ದುಡಿಯುವ ಮಹಿಳೆಯರ ಸಂಖ್ಯೆ ಕ್ರಮೇಣ ಏರಿಕೆ: ಮಹಿಳೆಯರ ಕಾರ್ಮಿಕ ಜನಸಂಖ್ಯಾ ಅನುಪಾತದಲ್ಲಿ ದಾಖಲೆ ಪ್ರಮಾಣದಲ್ಲಿ ಏರುಗತಿ ಕಂಡಿದೆ. ಜೂನ್‌ನಲ್ಲಿ 30.2 ಮತ್ತು ಜುಲೈನಲ್ಲಿ 31.6 ರಷ್ಟಿದ್ದ ಸಂಖ್ಯೆ ಆಗಸ್ಟ್‌ನಲ್ಲಿ 33.7ಕ್ಕೆ ಏರಿದೆ. ಗ್ರಾಮೀಣ ಪ್ರದೇಶದಲ್ಲಿ ದುಡಿಯುವ ಮಹಿಳೆಯರ ದರ ಶೇ 35.2ರಿಂದ ಶೇ. 37.4ಕ್ಕೆ ಏರಿದೆ. ನಗರ ಪ್ರದೇಶದಲ್ಲಿ ಶೇ. 25.2ರಿಂದ ಶೇ. 26.1ಕ್ಕೆ ಏರಿಕೆ ಕಂಡಿದೆ.
ನಿರುದ್ಯೋಗ ದರ ಇಳಿಕೆಗೆ ಕಾರಣವೇನು?
ಕೇಂದ್ರ ಸರ್ಕಾರ ತಂದಿರುವ ಉದ್ಯೋಗ ಸಂಬಂಧಿಸಿದ ಯೋಜನೆ.
ನಗರ ಹಾಗೂ ಗ್ರಾಮೀಣ ಮಹಿಳೆಯರಿಗೆ ಉದ್ಯೋಗದಲ್ಲಿ ಪ್ರೋತ್ಸಾಹ
ಕೃಷಿ ಕ್ಷೇತ್ರದಲ್ಲಿ ಚೇತರಿಕೆ ಮತ್ತು ಕೃಷಿ ಸಂಬಂಧಿತ ಯೋಜನೆಗಳು.
ಆನ್‌ಲೈನ್ ಮತ್ತು ಡಿಜಿಟಲ್ ಕ್ರಮೇಣ ಉದ್ಯೋಗ ಸೃಷ್ಟಿ.
ಕೇಂದ್ರ ಸರ್ಕಾರ ಮಹತ್ವದ ಆತ್ಮ ನಿರ್ಭರ ಭಾರತ ಅಭಿಯಾನ..
ಕಾರ್ಮಿಕ ಜನಸಂಖ್ಯಾ ಅನುಪಾತ ಆಗಸ್ಟ್‌ನಲ್ಲಿ ಶೇ. 55ಕ್ಕೆ ಏರಿದೆ…!: ಲೇಬರ್ ಫೋರ್ಸ್ ಪಾರ್ಟಿಸಿಪೇಷನ್ ರೇಟ್ ಅಂದರೆ ದುಡಿಯುವ ಜನರ ಸಂಖ್ಯೆ ಅಗಸ್ಟ್ನಲ್ಲಿ ಶೇ. 55ರಷ್ಟು ಏರಿಕೆ ಕಂಡಿದೆ. 15 ವರ್ಷಕ್ಕಿಂತ ಮೇಲ್ಪಟ್ಟ ಜನರು ದುಡಿಯುವ ಅನುಪಾತ ಜೂನ್‌ನಲ್ಲಿ ಶೇ. 54.2ರಷ್ಟಿತ್ತು.