ಸ್ವದೇಶಿ ಸಂಕಲ್ಪದಿಂದ ಭಾರತ ಶ್ರೇಷ್ಠ ಆರ್ಥಿಕ ಶಕ್ತಿಯಾಗಲಿದೆ

2
153

ಜಗದಾಲ್ ಪುರ (ಛತ್ತೀಸ್‌ಗಢ): ದೇಶದ 140 ಕೋಟಿ ಜನರು ಸ್ವದೇಶಿ ಸಂಕಲ್ಪವನ್ನು ಕೈಗೊಂಡರೆ, ಭಾರತವನ್ನು ವಿಶ್ವದ ಶ್ರೇಷ್ಠ ಆರ್ಥಿಕ ವ್ಯವಸ್ಥೆಯನ್ನಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಛತ್ತೀಸ್‌ಗಢದ ಜಗದಾಲ್‌ಪುರದಲ್ಲಿ ಶನಿವಾರ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವದೇಶಿ ಸಂಸ್ಕೃತಿ ಮತ್ತು ಸ್ಥಳೀಯ ಉತ್ಪನ್ನಗಳ ಬಳಕೆ ದೇಶದ ಆರ್ಥಿಕ ಪ್ರಗತಿಗೆ ಬಲ ನೀಡುತ್ತದೆ ಎಂದು ಹೇಳಿದರು. “ನಾವು ಸ್ವದೇಶಿಯತ್ತ ಹೆಜ್ಜೆ ಇಟ್ಟರೆ, ಭಾರತ ಕೇವಲ ಆರ್ಥಿಕವಾಗಿ ಮಾತ್ರವಲ್ಲ, ತಾಂತ್ರಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿಯೂ ವಿಶ್ವದ ಮುಂಚೂಣಿಯ ರಾಷ್ಟ್ರವಾಗಲಿದೆ,” ಎಂದು ಶಾ ಹೇಳಿದರು.

ನಿಜವಾದ ರಾಷ್ಟ್ರಸೇವೆ: “ಅವಲಂಬನೆಯಿಂದ ಸ್ವಾವಲಂಬನೆಯತ್ತ ಸಾಗುವ ನಮ್ಮ ಪ್ರಯತ್ನಕ್ಕೆ ಜನರ ಸಹಭಾಗಿತ್ವ ಅತ್ಯಗತ್ಯ. ಪ್ರತಿಯೊಬ್ಬ ಭಾರತೀಯನು ಭಾರತೀಯ ಉತ್ಪನ್ನಗಳನ್ನು ಬಳಸಿ, ಸ್ಥಳೀಯ ಉದ್ಯಮಗಳನ್ನು ಉತ್ತೇಜಿಸಿದರೆ, ಅದೇ ನಿಜವಾದ ರಾಷ್ಟ್ರಸೇವೆ,” ಎಂದು ಹೇಳಿದರು.

2026ರ ಮಾರ್ಚ್ ವೇಳೆಗೆ ನಕ್ಸಲ್ ಮುಕ್ತ ಭಾರತ: ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ ನಕ್ಸಲ್ ಸಮಸ್ಯೆಯ ಕುರಿತೂ ಸ್ಪಷ್ಟ ಸಂದೇಶ ನೀಡಿದರು. “ದೇಶ 2026ರ ಮಾರ್ಚ್ 31ರ ವೇಳೆಗೆ ನಕ್ಸಲ್ ವಾದದಿಂದ ಸಂಪೂರ್ಣ ಮುಕ್ತವಾಗಲಿದೆ. ಕೆಲವು ಜನರು ನಕ್ಸಲರೊಂದಿಗೆ ಮಾತುಕತೆ ನಡೆಸಬೇಕೆಂದು ಸಲಹೆ ನೀಡುತ್ತಾರೆ. ಆದರೆ ನಾವು ಬಸ್ತಾರ್ ಸೇರಿದಂತೆ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಕಟಿಬದ್ಧವಾಗಿದ್ದೇವೆ. ಹೀಗಾಗಿ ಅವರೊಂದಿಗೆ ಮಾತುಕತೆ ನಡೆಸಲು ಯಾವುದೇ ಅಗತ್ಯವಿಲ್ಲ,” ಎಂದು ಸ್ಪಷ್ಟಪಡಿಸಿದರು.

“ನಕ್ಸಲರು ಶಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಸೇರಲು ಬಯಸಿದರೆ, ಸರ್ಕಾರ ಅವರ ಪುನರ್ವಸತಿಗೆ ಉತ್ತಮ ನೀತಿಗಳನ್ನು ರೂಪಿಸಿದೆ. ಆದರೆ ಅವರು ಹಿಂಸೆಯನ್ನು ಆರಿಸಿಕೊಂಡರೆ, ಸಶಸ್ತ್ರ ಪಡೆಗಳು ಮತ್ತು ಪೊಲೀಸರು ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ.”

ಅಮಿತ್ ಶಾ ಅವರ ಈ ಹೇಳಿಕೆಗಳು ನಕ್ಸಲ್ ಪೀಡಿತ ರಾಜ್ಯಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳಿಗೆ ಹೊಸ ಪ್ರೇರಣೆ ನೀಡಿವೆ ಎಂದು ರಾಜಕೀಯ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

Previous articleಸಿನಿಮಾ ಟಿಕೆಟ್‌ ಬೆಲೆ 200 ರೂ., ಜನರಿಗೆ ಟಿಕೆಟ್ ಕಾದಿಟ್ಟುಕೊಳ್ಳಿ ಎಂದ ಕೋರ್ಟ್
Next articleಸಿದ್ದರಾಮಯ್ಯ ಕನಸು: ಜಿಲ್ಲೆಗೊಂದು ವೈದ್ಯಕೀಯ ಕಾಲೇಜು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ

2 COMMENTS

  1. ಪ್ರಧಾನಿಯಿಂದ ಮೊದಲುಗೊಂಡಿರುವ ವಿದೇಶಿ ವಸ್ತುಗಳ ವ್ಯಾಮೋಹ, ವಿದೇಶೀ ವಸ್ತುಗಳ ಬಳಕೆ ತಮ್ಮ ಘನತೆ-ಗೌರವವನ್ನು ವಿಜೃಂಭಿಸುತ್ತವೆ ಎಂಬ ತಪ್ಪ ಕಲ್ಪನೆ ಮೊದಲು ಅಳಿಯಲಿ, ನಂತರ ಈ ಘೋಷಣೆ ಆಗಲಿ

LEAVE A REPLY

Please enter your comment!
Please enter your name here