ಕೊಪ್ಪಳ: ತುಂಗಭದ್ರಾ ಎಡದಂಡೆ ಕಾಲುವೆ ನವೀಕರಣ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು, ಈ ಹಿನ್ನೆಲೆ ತುಂಗಭದ್ರಾ ನೀರಾವರಿ ನಿಗಮ ವ್ಯಾಪ್ತಿಯ ೨೮ ಅಧಿಕಾರಿಗಳನ್ನು ಅಮಾನತು ಮಾಡಿ, ಸರ್ಕಾರವು ಆದೇಶ ಹೊರಡಿಸಿದೆ.
೨೦೦೯-೨೦೧೧ರಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ನವೀಕರಣ ಕಾಮಗಾರಿ ನಡೆಸಲಾಗಿದ್ದು, ೪೦೨ ಕೋಟಿ ಕಾಮಗಾರಿಗೆ ೧,೨೮೩ ಕೋಟಿ ಮಾಡಿದ್ದಾರೆ. ಇದರಿಂದಾಗಿ ಸುಮಾರು ೬೫೦ ಕೋಟಿ ರೂ. ಅವ್ಯವಹಾರ ನಡೆದ ಆರೋಪ ಕೇಳಿ ಬಂದಿದೆ. ಇದರಿಂದಾಗಿ ನೀರಾವರಿ ನಿಗಮ ಹಾಗೂ ಜಲ ಸಂಪನ್ಮೂಲ ಇಲಾಖೆಯಿಂದ ತನಿಖಾ ತಂಡ ನೇಮಿಸಿ, ತನಿಖೆ ನಡೆಸಲಾಗಿದೆ. ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಈ ಕಾಮಗಾರಿ ನಡೆಸಲಾಗಿದ್ದು, ಗುತ್ತಿಗೆದಾರರೊಂದಿಗೆ ಸೇರಿ ನಕಲಿ ಬಿಲ್ ಸೃಷ್ಟಿಸಿ, ಅವ್ಯವಹಾರದಲ್ಲಿ ಕೈಜೋಡಿಸಿದ್ದಾರೆ ಎನ್ನುವ ಆರೋಪ ಇಂಜಿನಿಯರ್ ಗಳು ಹಾಗೂ ಕಚೇರಿ ಅಧಿಕಾರಿಗಳ ಮೇಲೆ ಕೇಳಿ ಬಂದಿತ್ತು.