5ಕೆಜಿ ಗಾಂಜಾ ವಶ: ಇಬ್ಬರ ಬಂಧನ

0
40
ಕೋಟ್ಯಾಂತರ ಮೌಲ್ಯದ ಗಾಂಜಾ ವಶ
ಗಾಂಜಾ ವಶ

ಚಿಕ್ಕಮಗಳೂರು: 50 ಸಾವಿರ ರೂ. ಬೆಲೆ ಬಾಳುವ 5 ಕೆಜಿ 143 ಗ್ರಾಂ ಗಾಂಜಾ, ಪ್ಯಾಸೆಂಜರ್ ಆಟೋ ಹಾಗೂ ಇಬ್ಬರು ಆರೋಪಿ ಗಳನ್ನು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಚಿಕ್ಕಮಗಳೂರು ಬೇಲೂರು ರಸ್ತೆಯ ಮಾಗಡಿ ಕೆರೆ ಏರಿಯ ಮೇಲೆ ಬರುತ್ತಿದ್ದ ಪ್ಯಾಸೆಂಜರ್ ಆಟೋ ತಡೆದು ಪರಿಶೀಲನೆ ನಡೆಸಿದಾಗ ಮಾರಾಟ ಮಾಡುವ ಉದ್ದೇಶ ದಿಂದ ಸಾಗಿಸುತ್ತಿರುವುದನ್ನು ವಶಕ್ಕೆ ಪಡೆಯಲಾಗಿದೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್ಪಿ ಡಾ.ವಿಕ್ರಮ್ ಅಮಟೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್, ಡಿವೈಎಸ್‌ಪಿ ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಚಿನ್ ಕುಮಾರ್, ರಘನಂದನ್, ಸಿಬ್ಬಂದಿ ಗಳಾದ ಲೋಹಿತ್, ಯುವರಾಜ, ಮಹೇಶ್, ಸುನೀಲ್, ಕಿರಣ, ಶಶಿಧರ, ಶಿವರಾಜ್ ಕಾರ್ಯಾಚರಣೆ ನಡೆಸಿ ಗಾಂಜಾ, ಪ್ಯಾಸೆಂ ಜರ್ ಆಟೋ ಹಾಗೂ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Previous articleನಿವೃತ್ತಿ ದಿನವೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ
Next articleಡಿಸಿಸಿ ಬ್ಯಾಂಕ್ ನಕಲಿ ಗೋಲ್ಡ್ ಹಗರಣ: ಶಿವಮೊಗ್ಗದಲ್ಲಿ ಮುಂದುವರಿದ ಇಡಿ ದಾಳಿ