30 ಅಡಿ ಆಳದ ಬಾವಿಗೆ ಬಿದ್ದ ಹಸು ರಕ್ಷಣೆ

0
21

ಅಂಕೋಲಾ: ತಾಲೂಕಿನ ಬೆಲೇಕೇರಿಯ ತೆರೆದ ಬಾವಿಯೊಂದರಲ್ಲಿ ಆಕಸ್ಮಿಕವಾಗಿ ಬಿದ್ದ ಆಕಳನ್ನು ರಕ್ಷಿಸುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಸುಮಾರು 30 ಅಡಿ ಆಳದ ಬಾವಿಯಲ್ಲಿ ಬಿದ್ದ ಆಕಳಿಗೆ ಪ್ರಾಣಾಪಾಯದ ಸ್ಥಿತಿ ಎದುರಾಗಿತ್ತು. ದೂರವಾಣಿ ಮೂಲಕ ಅಗ್ನಿಶಾಮಕ ದಳದವರಿಗೆ ಸಾರ್ವಜನಿಕರು ಸಂಪರ್ಕಿಸಿದ್ದರು. ಮಿಂಚಿನ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸಾವು ಬದುಕಿನ ನಡುವೆ ಸೆಣೆಸಾಡುತ್ತಿದ್ದ ಆಕಳನ್ನು ರಕ್ಷಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಠಾಣಾಧಿಕಾರಿ ಜಯಂತ್ ಎನ್. ನಾಯ್ಕ ಸೇರಿದಂತೆ ಸಿಬ್ಬಂದಿಗಳಾದ ಗಜಾನನ ನಾಯ್ಕ, ರಾಜೇಶ್ ನಾಯಕ, ಗಣೇಶ್ ನಾಯ್ಕ, ಹರ್ಷ ನಾಯಕ, ಮಂಜುನಾಥ ನಾಯಕ, ಸುಜಯ್ ನಾಯಕ, ಶ್ರೀನಿವಾಸ ನಾಯಕ ಪಾಲ್ಗೊಂಡಿದ್ದರು.

Previous articleಬಿಎಸ್‌ವೈಯಿಂದ ಶಾಗೆ ಬ್ಲ್ಯಾಕ್‌ಮೇಲ್
Next articleಬಾವಿ ಸ್ವಚ್ಛಕ್ಕೆ ಇಳಿದಿದ್ದ 8 ಜನರು ಉಸಿರುಗಟ್ಟಿ ಸಾವು