ಹೆದ್ದಾರಿ ಅಗಲೀಕರಣಕ್ಕೆ ಒತ್ತಾಯಿಸಿ ಪ್ರಧಾನಿಗೆ ಪತ್ರ ರವಾನೆ

0
11

ಶ್ರೀರಂಗಪಟ್ಟಣ: ತಾಲ್ಲೂಕಿನ ಕಿರಂಗೂರು ಗ್ರಾಮದ ಮಾರ್ಗವಾಗಿ ಸಾಗುವ ಶ್ರೀರಂಗಪಟ್ಟಣ-ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣಕ್ಕೆ ಆಗ್ರಹಿಸಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ರವಾನಿಸುವ ಮೂಲಕ ಚಳುವಳಿ ನಡೆಸಿದರು.
ತಾಲೂಕಿನ ಕಿರಂಗೂರು ಗ್ರಾಮದ ಹೆದ್ದಾರಿ ಬದಿಯಲ್ಲಿನ ಅಂಚೆ ಡಬ್ಬಕ್ಕೆ ಸೋಮವಾರ ಮ.ರ.ವೇ ಸಂಸ್ಥಾಪಕ ಶಂಕರ್ ಬಾಬು ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಬೇಡಿಕೆಗಳಿರುವ ಪತ್ರಗಳನ್ನು ಪ್ರಧಾಜಿಗೆ ರವಾನಿಸಿ ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕಲು ಒತ್ತಾಯಿಸಿದರು. ಈ ರಸ್ತೆಯು ತುಂಬಾ ಕಿರಿದಾಗಿದ್ದು, ಹೆಚ್ಚನ ವಾಹನ ಸಂಚಾರವಿರುವ ಕಾರಣ ಮೇಲಿಂದ ಮೇಲೆ ಅಪಘಾತಗಳು ಸಂಭವಿಸಿ ಸಾವು ನೋವುಗಳಾಗುತ್ತಿವೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಹೆದ್ದಾರಿ ಅಗಲಿಕೆಗೆ ಮುಂದಾಗುವ ಮೂಲಕ‌ ಸಾವು ನೋವುಗಳನ್ನು ತಪ್ಪಿಸಿ, ಮಹಿಳೆಯರಿಗೆ ಮುತ್ತೈದೆ ಭಾಗ್ಯ ಹಾಗೂ ಪೋಷಕರಿಗೆ ಮಕ್ಕಳ ಭಾಗ್ಯ ಕರುಣಿಸುವಂತೆ ಒತ್ತಾಯಿಸಿ ಪತ್ರ ರವಾನಿಸಿದರು.

Previous articleಬಸ್ ಸಂಚಾರ ಅವ್ಯವಸ್ಥೆ ಖಂಡಿಸಿ ವಿದ್ಯಾರ್ಥಿಗಳಿಂದ ರಸ್ತೆ ತಡೆ
Next articleಮುರುಘಾ ಶ್ರೀ ಬಂಧನದ ಆದೇಶಕ್ಕೆ ಹೈಕೋರ್ಟ್ ತಡೆ