ಹುಬ್ಬಳ್ಳಿ: ನಗರದ ಜನತೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಿಹಿ ಸುದ್ದಿಯೊಂದು ಹಂಚಿಕೊಂಡಿದ್ದಾರೆ,
ಹುಬ್ಬಳ್ಳಿ-ಬೆಂಗಳೂರ ಮಧ್ಯೆ ಮತ್ತೊಂದು ವಿಮಾನಸೇವೆ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊಂಡು ರಾಜ್ಯದ ರಾಜಧಾನಿಯೊಂದಿಗೆ ವಾಣಿಜ್ಯ ನಗರಿಯಾದ ಹುಬ್ಬಳ್ಳಿಯಿಂದ ಈಗ ಮತ್ತೊಂದ ವಿಮಾನಯಾನ ಶೀಘ್ರದಲ್ಲಿಯೇ ( ಮಾರ್ಚ 30ರಿಂದ ) ಆರಂಭವಾಗಲಿದೆ. ಇದರೊಂದಿಗೆ ದಿನಕ್ಕೆ ಮೂರು ವಿಮಾನಗಳು ಬೆಂಗಳೂರು ಮತ್ತು ಹುಬ್ಬಳ್ಳಿ ಮಧ್ಯ ಸಂಚಾರ ಮಾಡಲಿವೆ
Bengaluru – Hubballi 6E7056 9:55 AM – 11:20 AM
Hubballi – Bengaluru 6E 7263 11:55 AM – 1:20 PM
ಹುಬ್ಬಳ್ಳಿ – ಬೆಂಗಳೂರ ನಡುವೆ ಮತ್ತೊಂದು ವಿಮಾನಸೇವೆಗೆ ಅವಕಾಶಕಲ್ಪಿಸಿದ್ದಕ್ಕಾಗಿ ಇಂಡಿಗೋ ಆಡಳಿತ ವರ್ಗಕ್ಕೆ ಧನ್ಯವಾದಗಳು. ಶೀಘ್ರದಲ್ಲಿಯೇ ಹುಬ್ಬಳ್ಳಿ ಮತ್ತು ಅಹ್ಮದಾಬಾದ ನಡುವೆ ವಿಮಾನಯಾನ ಆರಂಭಿಸಲು ವಿನಂತಿಸಿದ್ದೇನೆ ಎಂದಿದ್ದಾರೆ.