ಹಸಿರು ಜಲಜನಕದ ಬಳಕೆಗೆ ಭಾರತವೇ ನಾಂದಿ ಹಾಡಿದೆ

0
14

ಬೆಂಗಳೂರು: ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹಸಿರು ಜಲಜನಕವನ್ನು ಬಳಸುವ ಮೊದಲೇ ಭಾರತದಲ್ಲಿ ಹಸಿರು ಜಲಜನಕದ ಬಳಕೆಗೆ ನಾಂದಿ ಹಾಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಈ ಕುರಿತಂತೆ ಲೋಕಸಬೆಯಲ್ಲಿ ಮಾತನಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಭಾರತದಲ್ಲಿ ತಂತ್ರಜ್ಞಾನದ ಅನುಷ್ಠಾನವು, ಪ್ರಪಂಚಕ್ಕೆ ಹೋಲಿಸಿದರೆ ಯಾವಾಗಲೂ ಬಹಳ ವಿಳಂಬವಾಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹಸಿರು ಜಲಜನಕವನ್ನು ಬಳಸುವ ಮುನ್ನವೇ ಭಾರತದಲ್ಲಿ ಹಸಿರು ಜಲಜನಕದ ಬಳಕೆಗೆ ನಾಂದಿ ಹಾಡಿದ ಶ್ರೇಯಸ್ಸು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಹಸಿರು ಜಲಜನಕದ ಉತ್ಪಾದನೆ ಮತ್ತು ರಫ್ತಿಗೆ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಮಾಡುವ ಉದ್ದೇಶದೊಂದಿಗೆ ಮುನ್ನಡೆಯುತ್ತಿದೆ. ಹಸಿರು ಜಲಜನಕ ಮಿಷನ್‌ಗೆ ರೂ. 19744 ಕೋಟಿ ಮೀಸಲಿಡಲಾಗಿದೆ ಎಂದಿದ್ದಾರೆ.

Previous articleಶಾ ಮುಂದೆ ಹಗರಣಗಳ ಮಾಹಿತಿ ಬಿಚ್ಚಿಟ್ಟ ವಿಜಯೇಂದ್ರ
Next articleಯುವತಿಯನ್ನ ವಿವಸ್ತ್ರಗೊಳಿಸಿ ಹಲ್ಲೆ