ಹಲ್ಲೆಗೊಳಗಾದ ಕಾರ್ಮಿಕರಿಗೆ ಉದ್ಯೋಗದ ಭರವಸೆ: ಸಚಿವ ಎಂ. ಬಿ. ಪಾಟೀಲ

0
28

ಹಲ್ಲೆಗೊಳಗಾದ ಕಾರ್ಮಿಕರಿಗೆ ತಲಾ ರೂ. 50 ಸಾವಿರ ಪರಿಹಾರ

ವಿಜಯಪುರ: ಇಟ್ಟಂಗಿ ಭಟ್ಟಿಯಲ್ಲಿ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕರಿಗೆ ಪರಿಹಾರ ವಿತರಣೆ ಮಾಡಿ ಉದ್ಯೋಗದ ಭರವಸೆಯನ್ನು ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ನೀಡಿದ್ದಾರೆ.
ನಗರದ ಜಿಲ್ಲಾಸ್ಪತ್ರೆಗೆ ತೆರಳಿ ಗಾಯಾಳು ಕಾರ್ಮಿಕರನ್ನು ಭೇಟಿ ಮಾಡಿದ ಸಚಿವರು ಸಾಂತ್ವನ ಹೇಳಿದ್ದಾರೆ ವೈಯಕ್ತಿಕವಾಗಿ ಮೂವರಿಗೂ ತಲಾ ರೂ. 50 ಸಾವಿರ ಪರಿಹಾರ ಧನ ನೀಡಿದ್ದು. ಸರಕಾರದ ಎಲ್ಲ ಸೌಲಭ್ಯಗಳನ್ನು ದೊರಕಿಸಿಕೊಡುವುದರ ಜೊತೆಗೆ ಅವರು ಗುಣಮುಖರಾದ ನಂತರ BLDE ಸಂಸ್ಥೆಯಲ್ಲಿ ಅಥವಾ ಸೂಕ್ತ ಜಾಗದಲ್ಲಿ ಉದ್ಯೋಗಕ್ಕೂ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ, ಅಮಾನವೀಯವಾಗಿ ವರ್ತಿಸಿದ ಮಾಲೀಕನ ವಿರುದ್ಧ ಕಠಿಣ ಕಾನುನು ಕ್ರಮಗಳನ್ನು ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Previous articleರಾಜ್ಯದ 21 ಪೋಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ
Next articleಮಸಾಜ್ ಪಾರ್ಲರ್ ಹೆಸರಿನಲ್ಲಿ ಅನೈತಿಕ ದಂಧೆ: ಗಂಭೀರವಾಗಿ ಪರಿಗಣಿಸಿ