ಹನಿಟ್ರ್ಯಾಪ್ ಪ್ರಕರಣ ತನಿಖೆ: ಸಿಎಂಗೆ ಬಿಟ್ಟ ವಿಚಾರ

0
20

ತುಮಕೂರು : ಹನಿಟ್ರ್ಯಾಪ್ ಪ್ರಕರಣದ ಬಗ್ಗೆ  ತನಿಖೆ  ಎಸ್.ಐ.ಟಿ ಮಾಡುತ್ತಾರೋ ಅಥವಾ ಮತ್ತೊಬ್ಬರು ಮಾಡುತ್ತಾರೋ ಮಾಡಲಿ.  ಅದು ಗೃಹ ಮಂತ್ರಿಗಳಿಗೆ ಹಾಗೂ ಸಿಎಂಗೆ ಬಿಟ್ಟ ವಿಚಾರ. ನೋಟಿಸ್‌ ಕೊಟ್ಟರೆ ಉತ್ತರಿಸುತ್ತೇನೆ ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಹನಿಟ್ರ್ಯಾಪ್ ನಂತಹ ಹೀನಕೃತ್ಯ ಮಾಡುವವರು ರಾಜಕೀಯದಲ್ಲಿ ಇರಬಾರದು.
ಆರೋಪಿಗಳು ಪ್ರಭಾವಿ ಇದ್ದಾರೋ ಇಲ್ವೋ, ಇಂತಹ ಕಾನೂನು ಬಾಹಿರ ಕ್ರಮಕ್ಕೆ ಯಾರ ಕುಮ್ಮಕ್ಕಿರಲಿ, ಪ್ರಯತ್ನವಿರಲಿ. ಅವರಿಗೆ ದೇವರು ಒಳ್ಳೆದು ಮಾಡಲ್ಲ  ಎಂದರು.
ನಾನು ಹೇಳೋದು ಬೇರೆಯವರಿಗೊಸ್ಕರ ಅಲ್ಲ, ನನ್ನನ್ನು ಸೇರಿಸಿ ಹೇಳುತ್ತಿರುವುದು ಬೆಂಗಳೂರು, ಮುಂಬೈ ಯಾರುಬೇಕಾದರೂ ಇರಬಹುದು. ನಮ್ಮ ಪಕ್ಷದವರೋ, ಇನ್ನೊಂದು ಪಕ್ಷದವರೋ ಯಾರೇ ಪ್ರಯತ್ನ ಮಾಡಲಿ ರಾಜಕಾರಣಿಗಳನ್ನು ಹೊರತು ಪಡಿಸಿ ಮಾಡಿರಲಿ. ಈ ರೀತಿಯ ಹೀನ ಕೃತ್ಯಗಳಿಗೆ ಪ್ರಯತ್ನ ಮಾಡಿರೋದು ಖಂಡನಾರ್ಹ ಎಂದರು.
ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ ನೀಡಿರುವ ವಿಚಾರದ ಬಗ್ಗೆ ಚರ್ಚಿಸಿರುವ ಆಡಿಯೋ ವೈರಲ್‌ ಆಗಿದ್ದು ಈ ತನಿಖೆ ನಡೆಯುತ್ತಿದೆ ಎಂದರು.

Previous articleವಿದ್ಯುತ್ ಶಾಕ್‌ನಿಂದ ಕಾಡಾನೆ ಸಾವು
Next articleಸಿದ್ದರಾಮಯ್ಯ ತವರೂರಿಂದ ಜನಾಕ್ರೋಶ ಯಾತ್ರೆ