ಮಂಜುಳಾ ದನ ಮೇಯಿಸಲು ಜಾನುವಾರು ಸಹಿತ ಆಗಮಿಸಿ, ವೋಟ್ ಮಾಡಿ ದನ ಮೇಯಿಸಲು ಹೋದ ಮಂಜುಳಾ
ಬಳ್ಲಾರಿ: ಸಂಡೂರು ಉಪಚುನಾವಣೆಯ ಮತದಾನ ಪ್ರಕ್ರಿಯೆ ಬೆಳಗ್ಗೆ ೯ ಗಂಟೆ ಬಳಿಕ ಚುರುಕಾಗಿದೆ.
ಬನ್ನಿಹಟ್ಟಿ ಗ್ರಾಮದಲ್ಲಿ ೯೦ ವರ್ಷದ ಅಜ್ಜಿ ಹನುಮಕ್ಕ ಯುವಕರನ್ನು ಮೀರಿಸುವಂತೆ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾವಣೆ ಮಾಡಿದರು. ಹನುಮಕ್ಕ ಯಾವುದೇ ವಾಹನ ಸೌಕರ್ಯವೂ ಇಲ್ಲದೇ ನಡೆದುಕೊಂಡೇ ಬಂದು ಮತದಾನ ಮಾಡಿದ್ದು ಗಮನ ಸೆಳೆಯಿತು. ಇನ್ನು ಬನ್ನಿಹಟ್ಟಿ ಗ್ರಾಮದ ಮಂಜುಳಾ ದನ ಮೇಯಿಸಲು ಜಾನುವಾರು ಸಹಿತ ಆಗಮಿಸಿದ್ದರು. ಮುರಾರ್ಜಿ ದೇಸಾಯಿ ವಸತಿ ಶಾಲೆ ಮುಂದೆ ದನ ಬಿಟ್ಟು, ಬುತ್ತಿಯನ್ನು ಇಟ್ಟು ಮತಗಟ್ಟೆಗಳಿಗೆ ತೆರಳಿ ವೋಟ್ ಮಾಡಿ ಬಳಿಕ ಜಮೀನಿಗೆ ತೆರಳಿದ್ದು ಕಂಡು ಬಂತು.