ಹಂಪಿಯಲ್ಲಿ ಪ್ರತ್ಯಕ್ಷವಾದ ಚಿರತೆ

0
26

ವಿಜಯನಗರ : ದಕ್ಷಿಣ ಕಾಶಿ ಹಂಪಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.
ಹಂಪಿಯ ಹೇಮಕೂಟದ ಬಳಿ ಗುಡ್ಡದ ಮೇಲೆ ಚಿರತೆ ಕಂಡುಬಂದಿದೆ, ಈ ಮುಂಚೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ಪ್ರದೇಶಗಳಲ್ಲಿ ಕರಡಿ ಪ್ರತ್ಯಕ್ಷವಾಗಿತ್ತು, ಇದರ ಬೆನ್ನಲ್ಲೇ ಈಗ ಚಿರತೆಯ ಸರದಿಯಾಗಿದ್ದು, ಸಾಯಂಕಾಲದ ಹೊತ್ತು ಚಿರತೆ ಗುಡ್ಡದ ಮೇಲೆ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ, ಈ ಹಿಂದೆ ಹಂಪಿಯ ಕೆಲ ಪ್ರದೇಶದಲ್ಲಿ ಜೋಡಿ ಚಿರತೆಗಳು ಪ್ರತ್ಯಕ್ಷವಾಗಿದ್ದವು. ಚಿರತೆ ಮತ್ತು ಮಾನವ ಸಂಘರ್ಷದ ಯಾವುದೇ ಪ್ರಕರಣಗಳು ಬೆಳಕಿಗೆ ಬಂದಿಲ್ಲ, ಹಂಪಿಯ ಸ್ಥಳೀಯ ನಿವಾಸಿಯೊಬ್ಬರ ಕ್ಯಾಮೆರಾದಲ್ಲಿ ಚಿರತೆ ಪ್ರತ್ಯಕ್ಷದ ಫೋಟೋಸ್, ವಿಡಿಯೋ ಸೆರೆಯಾಗಿದೆ.

Previous articleಉಡುಪಿ ನಗರದಲ್ಲಿ ಯುಜಿಡಿ ವ್ಯವಸ್ಥೆ ಇಲ್ಲ
Next articleನಿರ್ಗತಿಕನಿಗೆ ಆಸರೆಯಾದ ಟೌನ್ ಪೊಲೀಸರು