ಸೆಲ್ಫಿ ತೆಗೆಯುವಾಗ ಪ್ರವಾಸಿಗ ಹೆಬ್ಬೆ ಜಲಪಾತದಲ್ಲಿ ಬಿದ್ದು ಸಾವು

0
8

ಚಿಕ್ಕಮಗಳೂರು: ಹೆಬ್ಬೆ ಜಲಪಾತದಲ್ಲಿ ಪ್ರವಾಸಿಗ ಸೆಲ್ಫಿ ತೆಗೆಯುವಾಗ ಬಂಡೆ ಮೇಲಿಂದ ಕಾಲು ಜಾರಿ ಬಿದ್ದು ಸಾವಪ್ಪಿದ್ದಾರೆ.
ಹೈದರಾಬಾದ್ ಮೂಲದ ಯುವಕ ಶ್ರವಣ್ (೨೫) ಸಾವಪ್ಪಿರುವ ವ್ಯಕ್ತಿ.ತರೀಕೆರೆ ತಾಲೂಕಿನ ಹೆಬ್ಬೆ ಫಾಲ್ಸ್ ನಲ್ಲಿ ಈ ಘಟನೆ ನಡೆದಿದೆ. ಹೈದರಾಬಾದ್‌ನಿಂದ ಕಾಫಿನಾಡಿನಲ್ಲಿ ಇಬ್ಬರು ಯುವಕರು ಪ್ರವಾಸ ಕೈಗೊಂಡಿದ್ದರು.
ಇಂದು ಬೆಳಿಗ್ಗೆ ಬೈಕ್‌ನಲ್ಲಿ ಹೆಬ್ಬೆ ಫಾಲ್ಸ್‌ಗೆ ತೆರಳಿದ್ದ ಸ್ನೇಹಿತರು ಸೆಲ್ಫಿ ತೆಗೆದುಕೊಳ್ಳುವ ವೇಳೆಯಲ್ಲಿ ಕಾಲು ಜಾರಿ ಬಿದ್ದು ಒಬ್ಬರು ಸಾವಪ್ಪಿದ್ದಾರೆ.ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರೇಮ್ ಸಿಂಗ್
Next articleರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಬಸ್‌ ತಡೆದು ಪ್ರತಿಭಟನೆ