ಬೆಂಗಳೂರು: ಮೋದಿ ಒಂದು ಸುಳ್ಳು ಹೇಳ್ತಾರೆ-ಅಮಿತ್ ಶಾ ಇನ್ನೊಂದು ಸುಳ್ಳು ಹೇಳ್ತಾರೆ-ನಿರ್ಮಲಾ ಸೀತಾರಾಮನ್ ಮತ್ತೊಂದು ಸುಳ್ಳು ಹೇಳ್ತಾರೆ. ಈ ಸುಳ್ಳಿನ ಪಾರ್ಟಿಗೆ ಮತ ಹಾಕಿದ್ರೆ ನಿಮ್ಮ ಮತಕ್ಕೆ ಗೌರವ ಬರ್ತದಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜೀವ್ ಗೌಡ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು. ಪ್ರೊ.ರಾಜೀವ್ ಗೌಡ ಸಮರ್ಥ ಸಂಸದ ಆಗುವ, ನಾಡಿನ ಜನತೆಯ ಧ್ವನಿಯಾಗುವ ಎಲ್ಲಾ ಅರ್ಹತೆ ಹೊಂದಿದ್ದಾರೆ ಎಂದರು.