ಸುಲಭವಾಗಿ ಮಾಡಿ ಸಬ್ಬಕ್ಕಿ ಮೊಸರನ್ನ

0
49
ಸಾಂದರ್ಭಿಕ ಚಿತ್ರ

ಬೇಕಾಗುವ ಸಾಮಗ್ರಿಗಳು: ೧ ಲೋಟ ಸಬ್ಬಕ್ಕಿ, ೧ ೧/೨ ಲೋಟ ಮೊಸರು, ೧ ೧/೨ ಲೋಟ ಹಾಲು, ೧/೨ ಲೋಟ ಸಣ್ಣಗೆ ಹೋಳು ಮಾಡಿದ ಕಾಯಿ ಚೂರು, ೧೦- ೧೨ ಹಸಿಮೆಣಸು, ಕೊತ್ತಂಬರಿ ಸೊಪ್ಪು, ಒಗ್ಗರಣೆಗೆ ಸಾಸುವೆ, ಕಡಲೆಬೇಳೆ, ಉದ್ದಿನಬೇಳೆ .
ಮಾಡುವ ವಿಧಾನ: ಸ್ವಲ್ಪ ತುಪ್ಪದಲ್ಲಿ ಸಬ್ಬಕ್ಕಿ ಕರಿದು ತಣ್ಣಗಾಗಿಸಿ. ಮೊಸರನ್ನು ಕಡೆದು ಅದರಲ್ಲಿ ಸುಮಾರು ೧ ೧/೨ ಗಂಟೆ ನೆನೆಸಿಡಿ. ನೆನೆದ ಸಬ್ಬಕ್ಕಿಗೆ ಹಾಲು ಸೇರಿಸಿ. ಕಾಯಿಚೂರು ಹಸಿಮೆಣಸು, ಉಪ್ಪು ಬೆರೆಸಿ. ಈಗ ಒಗ್ಗರಣೆ ತಯಾರಿಸಿ ಹಾಕಿರಿ. ರುಚಿಗೆ ಬೇಕೆನಿಸಿದರೆ ಒಂದಷ್ಟು ಒಣದ್ರಾಕ್ಷಿ ಬೆರೆಸಿ ಚೆನ್ನಾಗಿ ಕಲಸಿ. ಉಪ್ಪಿನಕಾಯಿ ರಸದೊಂದಿಗೆ ಸವಿಯಿರಿ.

ಕೆ.ಲೀಲಾ ಶ್ರೀನಿವಾಸ್, ಹರಪನಹಳ್ಳಿ

Previous articleನಿರ್ಗತಿಕನಿಗೆ ಆಸರೆಯಾದ ಟೌನ್ ಪೊಲೀಸರು
Next articleಕೆ-ಸೆಟ್‌-23: ಅರ್ಹ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ದಿನಾಂಕ ಪ್ರಕಟ