ಸುಪ್ರೀಂ ಕೋರ್ಟ್‌ಗೆ ಹೋಗುವವರನ್ನು ತಡೆಯಲಾಗದು

0
19

ದಾವಣಗೆರೆ: ಮುಡಾ ಕೇಸ್‌ನಲ್ಲಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲವೆಂದು ಹೈಕೋರ್ಟ್ ಸ್ಪಷ್ಟಪಡಿಸಿದ್ದು, ಸಿಬಿಐಗೆ ವಹಿಸುವ ಅವಶ್ಯಕತೆ ಇಲ್ಲವೆಂದು ಕೂಡ ಹೇಳಿದೆ. ಸುಪ್ರೀಂ ಕೋರ್ಟ್‌ಗೆ ಹೋಗುವವರನ್ನು ಹೋಗಬೇಡಿ ಅಂತಾ ನಾವು ಹೇಳುವುದಕ್ಕೂ ಆಗುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಜಗಳೂರು ತಾ. ಉಚ್ಚಂಗಿಪುರ ಗ್ರಾಮದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಕೇಸ್‌ ಸಿಬಿಐಗೆ ನೀಡುವ ಅವಶ್ಯಕತೆ ಇಲ್ಲವೆಂದು ಹೈಕೋರ್ಟ್ ಹೇಳಿದ್ದು, ಅನಾವಶ್ಯಕವಾಗಿ ಈ ಪ್ರಕರಣ ದಾಖಲಾಗಿತ್ತು ಎಂದರು.
ಈಗ 13 ವರ್ಷಗಳ ಹಿಂದಿನ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರ ಇಲ್ಲವೆಂಬುದು ಸಾಬೀತಾಗಿದೆ. ಸುಪ್ರೀಂ ಕೋರ್ಟ್‌ಗೆ ಹೋಗುವವರನ್ನು ಹೋಗಬೇಡಿ ಎನ್ನಲಾಗದು. ಕಾನೂನಲ್ಲಿ ಅಂತಹವರಿಗೆ ಅವಕಾಶಕಾಶವೂ ಇದೆ. ಸಿದ್ದರಾಮಯ್ಯ ವಿರುದ್ಧ ಅನಾವಶ್ಯಕವಾಗಿ ಪ್ರಕರಣ ದಾಖಲಿಸಿರುವುದನ್ನು ಎತ್ತಿ ಹಿಡಿದಿದೆ. ಮುಂದಿನ ತನಿಖೆಗಳು ಕಾನೂನುಬದ್ಧವಾಗಿ ನಡೆಯುತ್ತಿವೆ ಎಂದು ಹೇಳಿದರು.
ರಾಜ್ಯದಲ್ಲಿ ನಾವು 13 ಸಾವಿರ ಶಿಕ್ಷಕರನ್ನು ನೇಮಕ ಮಾಡಿದ್ದೇವೆ. ಈ ಸಲ 16 ಸಾವಿರ ಶಿಕ್ಷಕ ಜೊತೆಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ 6 ಸಾವಿರ ಹುದ್ದೆಗಳನ್ನು ಶೀಘ್ರವೇ ತುಂಬುತ್ತೇವೆ. ನಮ್ಮ ಶಾಲೆ, ನಮ್ಮ ಜವಾಬ್ಧಾರಿ ಸ್ಕೀಮ್‌ನಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಈಗಾಗಲೇ 39 ಸಾವಿರ ವಾಟ್ಸಪ್ ಗ್ರೂಪ್‌ಗಳನ್ನು ನಾವು ಮಾಡಿದ್ದೇವೆ. 5 ಸಾವಿರ ರೂ. ನಿಂದ 5 ಕೋಟಿ ರೂ.ವರೆಗೂ ಅನುದಾನ ಬಂದಿದೆ. ಎಡಿಬಿ ಬ್ಯಾಂಕ್ ಇತರೆ ಮೂಲಗಳಿಂದಲೂ ಅನುದಾನ ಬರುತ್ತಿದೆ. ಈ ಬಜೆಟ್‌ನಲ್ಲಿ 5 ಸಾವಿರ ಹೊಸ ಶಾಲಾ ಕೊಠಡಿಗಳನ್ನು ನಿರ್ಮಿಸಲು ಬೇಡಿಕೆ ಇಟ್ಟಿದ್ದೇವೆ. ಸರ್ಕಾರ ಹೊರ ಭಾಗಿತ್ವ, ಜನಪ್ರತಿನಿಧಿಗಳ ಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳನ್ನು ಉತ್ತಮಪಡಿಸುತ್ತೇವೆ ಎಂದು ಅವರು ಹೇಳಿದರು.

Previous articleಮೈಕ್ರೋ ಫೈನಾನ್ಸ್ ಅಟ್ಟಹಾಸಕ್ಕೆ ಊರು ತೊರೆದ ದಂಪತಿ
Next articleಮುಡಾ ಹಗರಣದಿಂದ ಸಿದ್ದರಾಮಯ್ಯ ಆರೋಪ ಮುಕ್ತರಾಗಿಲ್ಲ