ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಪಾಕಿಸ್ತಾನದ ಬಜೆಟ್ಟಾ ಅಥವಾ ಕರ್ನಾಟಕದ ಬಜೆಟ್ಟಾ ಎಂದು ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.
ಬಜೆಟ್ ಮಂಡನೆ ಬಳಿಕ ಮಾತನಾಡಿರುವ ಅವರು, ಸಿದ್ದರಾಮಯ್ಯನವರು ಅತಿ ಹೆಚ್ಚು ಭಾರೀ ಬಜೆಟ್ ಮಂಡಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಆದರೆ, ಈ ಬಜೆಟ್‌ನ್ನು ನೋಡಿದಾಗ ಇದು ಕರ್ನಾಟಕದ ಬಜೆಟ್ಟಾ ಅಥವಾ ಪಾಕಿಸ್ತಾನದ ಬಜೆಟ್ನಾ ಎಂಬ ಸಂಶಯ ಮೂಡುತ್ತಿದೆ. ಇದು ಸಿದ್ದರಾಮಯ್ಯ ಅವರ ಬಜೆಟ್ ಅಲ್ಲ, ಬದಲಾಗಿ ಜಮೀರ್ ಅವರ ಬಜೆಟ್ ಆಗಿದೆ. ಕೋಮುಗಲಭೆ ಎಬ್ಬಿಸುವ ಬಜೆಟ್ ಇದಾಗಿದೆ ಎಂದು ಹೇಳಿದ್ದಾರೆ.
ಅಲ್ಪಸಂಖ್ಯಾತರಿಗೆ ಬಜೆಟ್‌ನಲ್ಲಿ ಸಾಕಷ್ಟು ಕೊಡುಗೆ ಕೊಡಲಾಗಿದೆ. ಆದರೆ ದಲಿತರಿಗೆ ಏನೂ ಇಲ್ಲ. ಕೇವಲ ಒಂದು ಸಮುದಾಯದ ತುಷ್ಟಿಕರಣ ಮಾಡಲಾಗಿದೆ. ಕೇಂದ್ರ ಸರ್ಕಾರದ ಬಜೆಟ್ ಒಂದು ಗಂಟೆಯಲ್ಲಿ ಮಂಡನೆ ಆಗಿದೆ. ಆದರೆ ಸಿದ್ದರಾಮಯ್ಯ ಬಜೆಟ್ ಮೂರುವರೆ ತಾಸುಗಳ ಕಾಲ ಮಂಡನೆ ಮಾಡಲಾಗಿದೆ. ವಕ್ಫ್‌ಗೆ 125 ಕೋಟಿ ಕೊಡಲಾಗಿದೆ. ಒಟ್ಟಾರೆ ಇದು ಸಿದ್ದರಾಮಯ್ಯ ಅವರ ನಿರ್ಗಮನದ ಬಜೆಟ್ ಆಗಿದೆ ಎಂದಿದ್ದಾರೆ.