ಸಿಡಿಲು ಬಡಿದು ಯುವಕ ಸಾವು

0
18

ಹುಬ್ಬಳ್ಳಿ: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ನಗರ ಹೊರವಲಯದ ತಾರಿಹಾಳದಲ್ಲಿ ಮಂಗಳವಾರ ಸಂಜೆ ನಡೆದಿದೆ.
ತಾರಿಹಾಳದ ಅರುಣ ಚುರುಮುರಿ(೧೮) ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ತಿಳಿಸಿದ್ದಾರೆ. ತಾರಿಹಾಳದ ಜೋಡಳ್ಳಿ ರಸ್ತೆಯಲ್ಲಿ ಜಾನುವಾರು ಮೇಯಿಸಲು ಹೋಗಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Previous articleಮಳೆಗೆ ಉರುಳಿ ಬಿದ್ದ ಹಂಪಿ ಸಾಲು ಮಂಟಪ
Next articleರಾಮೇಶ್ವರಂ ಕೆಫೆ ಪ್ರಕರಣ: ಹುಬ್ಬಳ್ಳಿಯಲ್ಲಿ ಇಬ್ಬರ ವಶಕ್ಕೆ ಪಡೆದ ಎನ್‌ಐಎ