ಸಿಎಂ ಸ್ಥಾನ ಸಿದ್ದು ಬಿಡದಿದ್ರೆ ಡಿಕೆಶಿ ಬಿಡೋದಿಲ್ಲ

0
33

ಗಂಗಾವತಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿಎಂ ಸ್ಥಾನ ಬಿಡದಿದ್ರೆ ಡಿಸಿಎಂ ಡಿ.ಕೆ. ಶಿವಕುಮಾರ್ ಖಾಲಿ ಮಾಡಿಸುವವರೆಗೂ ಬಿಡೋದಿಲ್ಲ ಎಂದು ಶಾಸಕ ಗಾಲಿ ಜನಾರ್ಧನ ರೆಡ್ಡಿ ವ್ಯಂಗ್ಯವಾಡಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕಾಂಗ್ರೆಸ್ಸಿನಲ್ಲಿ ಗುಂಪುಗಾರಿಕೆ ನಡೆದಿದೆ. ಡಿನ್ನರ್ ನೆಪದಲ್ಲಿ ಅದು ಉಲ್ಬಣಗೊಂಡಿದೆ. ಮುಖ್ಯಮಂತ್ರಿ ಸ್ಥಾನ ಅಲುಗಾಡುತ್ತಿದೆ. ಬಿಜೆಪಿಯಲ್ಲಿ ಬಸನಗೌಡ ಪಾಟೀಲ ಯತ್ನಾಳ ಬಣ, ಇನ್ನೊಂದು ಬಣ ಮುಖ್ಯವಲ್ಲ. ಪಕ್ಷವೆಂದ ಮೇಲೆ ಎಲ್ಲ ಸರಿಯಾಗುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಈಗಾಗಲೇ ಬಿಜೆಪಿ ಹೈಕಮಾಂಡ್ ಭೇಟಿಯಾಗಿದ್ದಾರೆ, ಎಲ್ಲವನ್ನೂ ಸರಿಪಡಿಸುತ್ತಾರೆ ಎಂದರು.
ನಮ್ಮ ಪಕ್ಷ ಟೀಕಿಸುವ ನೆಪದಲ್ಲಿ ಕಾಂಗ್ರೆಸ್ಸನವರು ತಮ್ಮ ತಟ್ಟೆಯಲ್ಲಿ ಏನು ಬಿದ್ದಿದೆ ಎಂಬುವುದನ್ನು ನೋಡಿಕೊಳ್ಳುವುದು ಮರೆತಿದ್ದಾರೆ ಎಂದು ಲೇವಡಿ ಮಾಡಿದರು.

Previous articleಬೈಕ್‌ಗೆ ಬಸ್ ಡಿಕ್ಕಿ: ಇಬ್ಬರ ಸಾವು
Next article೧೨ರಿಂದ ಕೂಡಲಸಂಗಮದಲ್ಲಿ ಶರಣ ಮೇಳ