ಸಾಲಬಾಧೆಯಿಂದ ವಿಷ ಸೇವಿಸಿ ರೈತ ಆತ್ಮಹತ್ಯೆ

0
37

ಕಲಬುರಗಿ: ಚಿಂಚೋಳಿ ತಾಲೂಕಿನ ನಾರನಾಳ ಗ್ರಾಮದ ರೈತನೊಬ್ಬ ಸಾಲದ ಬಾಧೆ ತಾಳದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು‌ ಸಾವನ್ನಪ್ಪಿದ್ದಾರೆ.
ನಾಗಪ್ಪ ಹಣಮಂತ ಎನ್ನುವ ರೈತ ೨ ಲಕ್ಷ ರೂ. ಸಾಲ ಮಾಡಿಕೊಂಡಿದ್ದ ಸಾಲಗಾರರ ಕಾಟ ಹೆಚ್ಚಾಗಿದ್ದಲ್ಲದೆ, ೧-೩೦ ಎಕರೆ ಭೂಮಿಯಲ್ಲಿ ಬೆಳೆದ ತೊಗರಿ ಬೆಳೆಯೂ ಕೈ ಕೊಟ್ಟಿತ್ತು. ಇದರಿಂದಾಗಿ ಬೇಸತ್ತು ಗುರುವಾರ ರಾತ್ರಿ ಹೊಲದಲ್ಲಿ ವಿಷ ಸೇವಿಸಿದ್ದ. ಆತನನ್ನು ಕೂಡಲೇ ಜಿಮ್ಸ್ ಆಸ್ಪತ್ರೆಗೆ ತಂದು ದಾಖಲು ಮಾಡಲಾಗಿತ್ತು. ಎರಡು ದಿನ ಜೀವನ್ಮರಣದ ಹೋರಾಟ ನಡೆಸಿದ ನಾಗಪ್ಪ ಶುಕ್ರವಾರ ತಡ ರಾತ್ರಿ ಸಾವನ್ನಪ್ಪಿದ್ದಾರೆ. ಪತ್ನಿ ಶ್ರೀದೆವಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ಚಿಂಚೋಳಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಭೀಕರ ಅಪಘಾತ: ಒಂದೇ ಕುಟುಂಬದ ಮೂವರು ಸೇರಿ ನಾಲ್ವರು ಸ್ಥಳದಲ್ಲೆ ಸಾವು
Next articleಹಳಿ ತಪ್ಪಿದ ಎಕ್ಸ್‌ಪ್ರೆಸ್‌ ರೈಲು