ಸರಳ ಸಜ್ಜನಿಕೆ ರಾಜಕಾರಣಿ

0
19

ಬೆಳಗಾವಿ: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ರವರ ನಿಧನಕ್ಕೆ ಆಹಾರ ಸಚಿವ ಕೆಹೆಚ್. ಮುನಿಯಪ್ಪ ಸಂತಾಪ ಸೂಚಿಸಿದ್ದಾರೆ.
ಸರಳ ಸಜ್ಜನಿಕೆ ರಾಜಕಾರಣಿ ಮಾಜಿ ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್ ರವರ ನಿಧನದ ಸುದ್ದಿ ತೀವ್ರ ನೋವನ್ನುಂಟು ಮಾಡಿದೆ. ನಾನು ಅವರೊಂದಿಗೆ ಕೆಲಸ ಮಾಡಿದ್ದು, ಸರಳ ಸಜ್ಜನಿಕೆಯಿಂದ ಇಲಾಖೆಯ ಯಾವುದೇ ವಿಷಯಗಳಿರಲಿ ಆದೇಶ ಕೊಡುತ್ತಿರಲ್ಲಿ ಸಾಧ್ಯವಾದರೆ ಮಾಡಬಹುದಾ ನೋಡಿ ಎನ್ನುತ್ತಿದ್ದರು.
ಪಿ.ವಿ. ನರಸಿಂಹರಾವ್‌ರವರು ಪ್ರಧಾನಿಯಾಗಿದ್ದಾಗ ಅವರು ಹಣಕಾಸು ಸಚಿವರಾಗಿ ಈ ದೇಶಕ್ಕೆ ತನ್ನದೆ ಆದ ಶೈಲಿಯಲ್ಲಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದರು. ನ್ಯಾಷನಲ್ ಫುಡ್ ಸೆಕ್ಯೂರಿಟಿ ಆಕ್ಟ್, ಮನ್ರೇಗಾ ಮೊದಲಾದ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಒತ್ತನ್ನು ನೀಡುತ್ತಿದ್ದರು. ಸೌಮ್ಯ ಸರಳ ಸಜ್ಜನಿಕೆ ರಾಜಕಾರಣಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ನೋವನ್ನು ಬರಿಸುವ ಶಕ್ತಿಯನ್ನು ಆ ದೇವರು ಕರುಣಿಸಲಿ ಎಂದರು.

Previous articleಅರ್ಥ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದ್ದ ಮನಮೋಹನ ಸಿಂಗ್
Next articleಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ರದ್ದು; ರಾಜ್ಯದಲ್ಲಿ ಒಂದು ವಾರ ಶೋಕಾಚರಣೆ