ಶೌಚಕ್ಕೆ ಹೋದ ಯುವಕ ಕಾಲುವೆಗೆ ಬಿದ್ದು ಸಾವು

0
26

ಅಥಣಿ: ಶೌಚಾಲಯಕ್ಕೆ ಹೋದ ವೇಳೆ ಕಾಲು ಜಾರಿ ಕಾಲುವೆಗೆ ಬಿದ್ದು ಯುವಕ ಸಾವನಪ್ಪಿರುವ ಘಟನೆ ಅಥಣಿ ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ನಡೆದಿದೆ.
ಶಿವರಾಯ ಮಲ್ಲಪ್ಪ ಕಾಂಬಳೆ(೨೧) ಮೃತ ವ್ಯಕ್ತಿ. ಇಬ್ಬರು ಸ್ನೇಹಿತರು ಜೊತೆಯಾಗಿ ಮುಂಜಾನೆ ಸಮೀಪದ ಕರಿಮಸೂತಿ ಕಾಲುವೆ ಬಳಿ ಶೌಚಕ್ಕೆ ಹೋದಾಗ ನೀರು ತರಲು ಮುಂದಾದ ಯುವಕ ಶಿವರಾಯ ಕಾಲುಜಾರಿ ಕಾಲುವೆಯಲ್ಲಿ ಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಅಥಣಿ ಪೊಲೀಸ್ ಠಾಣೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಕಾರ್ಯಾಚರಣೆ ನಡೆಸಿ ಶವ ಹೊರ ತೆಗೆದಿದ್ದಾರೆ. ಯುವಕನ ಕಳೆದುಕೊಂಡ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleದುಬೈನಲ್ಲಿ ಅಪಘಾತ, ನಾಲ್ವರ ಮೃತದೇಹ ಭಾರತಕ್ಕೆ
Next articleಎಟಿಎಂ ಬದಲಿಸಿ ಹಣ ಲಪಟಾಯಿಸಿದ ಖದೀಮರು