ಹುಬ್ಬಳ್ಳಿ: ಕನ್ನಡದ ಖ್ಯಾತ ನಟ ಶರಣ್ ಇತ್ತಿಚೆಗೆ ಶಿಗ್ಗಾಂವ ಬಳಿಯ ನಾರಾಯಣಪುರನ ಹೋಟೆಲ್‌ಗೆ ಭೇಟಿ ನೀಡಿ ತಮ್ಮ ಇಷ್ಟದ ಚುರುಮುರಿ ಸವಿದಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಶಿಗ್ಗಾಂವ ಪಕ್ಕದ ನಾರಾಯಣಪುರದಲ್ಲಿ ವೀರಭದ್ರೇಶ್ವರ ಹೋಟೆಲ್ ನನ್ನ ಬಾಲ್ಯದ ಚುರಮುರಿ spot. ಈ ಬಾರಿ ಹೋದಾಗ ಸಮಯ ಮೀರಿತ್ತು, ಇನ್ನೇನು ಬಾಗಿಲು ಜಡಿಯುವ ಸಮಯ, ಅಂದರೂ ಎಷ್ಟು ಅಕ್ಕರೆಯಿಂದ ನನ್ನ ಗುರುತು ಹಿಡಿದು ಅದೇ ರುಚಿಯ ಚುರುಮುರಿ ಮಾಡಿಕೊಟ್ಟರು. ವೀರಭದ್ರೇಶ್ವರ ಹೋಟೆಲಿನಿಂದ ಈಗ ಮತ್ತೊಂದು ಸವಿ ನೆನಪಿನಿಂದ ಮರುಳುತ್ತಿದ್ದೇನೆ ಎಂದಿದ್ದಾರೆ.
ಕನ್ನಡ ಚಿತ್ರರಂಗದ ನಾಯಕ ನಟರಲ್ಲಿ ಶರಣ್ ಕೂಡ ಒಬ್ಬರು. ಇವರು ಹಾಸ್ಯ ಕಲಾವಿದರಾಗಿದ್ದು ಈಗ ನಾಯಕ ನಟರಾಗಿರುವ ಈ ನಟನಿಗೆ ತಾವು ಬೆಳದು ಬಂದ ಹಾದಿ ಮರೆತು ಹೋಗಿಲ್ಲ. ನಟ ಶರಣ್ ಹುಬ್ಬಳ್ಳಿಯಲ್ಲಿಯೇ ಬೆಳೆದವ್ರು. ಇಲ್ಲಿಯ ಪ್ರತಿ ರಸ್ತೆಗಳಿಂದಲೂ ಪರಿಚಿತರು. ಇವರಿಗೆ ಹುಬ್ಬಳ್ಳಿ ಒಂದು ವಿಶೇಷ ಊರೇ ಆಗಿದೆ. ಈ ಊರಿನ ಬಗ್ಗೆ ವಿಶೇಷ ಅಟ್ಯಾಚ್ಮೆಂಟ್ ಕೂಡ ಶರಣ್ ಅವರಿಗೆ ಇದೆ.


























