ಶಾಲೆ ರಜೆ ಎಂಬ ನಕಲಿ ಆದೇಶ :  ಡಿಸಿ ಎಚ್ಚರಿಕೆ

0
13

ಮಂಗಳೂರು : ರಜೆಯ ವಿಚಾರದಲ್ಲಿ ಜಿಲ್ಲಾಧಿಕಾರಿಯ ನಕಲಿ ಆದೇಶ ಪತ್ರ ಸೃಷ್ಠಿಸಿದವರ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ರೆಡ್ ಅಲರ್ಟ್ ಇದ್ದ ಕಾರಣದಿಂದ ನಿರಂತರ ಶಾಲೆಗೆ ರಜೆ ಘೋಷಣೆ ಮಾಡಲಾಗಿತ್ತು. ಬುಧವಾರ(ಜು.17)ಮೊಹರಂ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಇದ್ದು, ಗುರುವಾರ(ಜು.18) ಶಾಲೆ ಪುನರಾರಂಭಗೊಳ್ಳಲಿದೆ. ಆದರೆ ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಕೂಡಾ ರಜೆ ಘೋಷಣೆ ಮಾಡಲಾಗಿದೆ ಎಂಬ ಆದೇಶ ಪತ್ರ ಹರಿದಾಡಿದೆ. ಯಾರೋ ಕಿಡಿಗೇಡಿಗಳು ಈ ನಕಲಿ ಆದೇಶ ಪತ್ರ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ಜು.18ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯನ್ನು ಜಿಲ್ಲಾಡಳಿತ ಮಾಡಿಲ್ಲ. ಆದರೆ ಪ್ರತಿದಿನವೂ ಜಿಲ್ಲಾಧಿಕಾರಿ ರಜೆ ಘೋಷಣೆ ಮಾಡುವುದಕ್ಕಿಂತ ಮುಂಚಿತವಾಗಿ ಸಾಮಾಜಿಕ ಜಾಲಾತಾಣಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಎಂದು ಡಿಸಿ ಅವರ ನಕಲಿ ಆದೇಶ ಪ್ರತಿ ರವಾನೆಯಾಗುತ್ತದೆ. ಇದರಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗುತ್ತಿ ದ್ದಾರೆ. ಇಂತಹ ಚಟುವಟಿಕೆಗಳನ್ನು ತಡೆಯಲು ರಜೆಯ ಬಗ್ಗೆ ಸುಳ್ಳು ಸುದ್ದಿಯನ್ನು ಹರಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿರುವುದಾಗಿ ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Previous articleಚಿಕ್ಕಮಗಳೂರು: ಐದು ತಾಲೂಕುಗಳ  ಶಾಲೆಗಳಿಗೆ ರಜೆ
Next articleಅವೈಜ್ಞಾನಿಕ ಅಭಿವೃದ್ಧಿ-ಪ್ರಕೃತಿಗೆ ನೇಣಿನ ಕುಣಿಕೆ