ಶಾಲಾಬಸ್ ಅಪಘಾತ: 6 ಮಕ್ಕಳ ದುರ್ಮರಣ

0
36

ಚಂಡೀಗಢ: ಶಾಲಾ ಬಸ್‌ ಪಲ್ಟಿಯಾಗಿ 6 ವಿದ್ಯಾರ್ಥಿಗಳು ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.
ಗಾಯಗೊಂಡ ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಬಸ್ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎಂದು ಸ್ಥಳಿಯರು ಅಭಿಪ್ರಾಯ ವ್ಯಕ್ತಪಡಿಸಿದ್ದು. ಬಸ್ ಚಾಲಕನನ್ನು ಬಂಧಿಸಲಾಗಿದ್ದು. ಆತನನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಿದ ಬಳಿಕವಷ್ಟೇ ಪಾನಮತ್ತನಾಗಿದ್ದಾನೆಯೇ ಎಂಬುದು ತಿಳಿದು ಬರಲಿದೆ. ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಜೆಯ ದಿನವೂ ಶಾಲೆ ಏಕೆ ತೆರೆದಿತ್ತು ಎಂಬುದನ್ನು ನಾವು ತನಿಖೆ ಮಾಡುತ್ತೇವೆ. ಚಾಲಕನನ್ನು ಬಂಧಿಸಲಾಗಿದೆ ಮತ್ತು ಆತನಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು” ಎಂದು ಕನಿನಾ ಡಿಎಸ್ಪಿ ಮಹೇಂದ್ರ ಸಿಂಗ್ ತಿಳಿಸಿದ್ದಾರೆ.

Previous articleಉದ್ಯಮಗಳ ಸ್ಥಾಪನೆ ಸಾಮಾಜಿಕ ಜಾಲತಾಣಕ್ಕೆ ಸೀಮಿತ
Next articleಸಾಮಾನ್ಯ ಕಾರ್ಯಕರ್ತರೇ ತಮಗೆ ಸ್ಟಾರ್ ಪ್ರಚಾರಕರು