ವ್ಯಕ್ತಿ ಸಾವು: ಸಿಪಿಐ, ಪಿಎಸ್‌ಐ ಅಮಾನತು

0
37
ಅಮಾನತು

ರಾಯಚೂರು: ಪೊಲೀಸರ ಥಳಿತದಿಂದ ಈಶ್ವರನಗರದ ನಿವಾಸಿ ವಿರೇಶ ಎಂಬುವವರು ಸಾವನ್ನಪ್ಪಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಗರದ ಪಶ್ಚಿಮ ಪೊಲೀಸ್ ಠಾಣೆಯ ಸಿಪಿಐ ನಾಗರಾಜ ಮೇಕಾ ಹಾಗೂ ಪಿಎಸ್‌ಐ ಮಂಜುನಾಥ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಅವರು ಆದೇಶಿಸಿದ್ದಾರೆ.
ನಗರದ ಈಶ್ವರ ಬಡಾವಣೆಯ ನಿವಾಸಿ ವೀರೇಶ ಪತ್ನಿಯೊಂದಿಗೆ ಜಗಳವಾಡಿಕೊಂಡಿರುವ ಕುರಿತಂತೆ ವೀರೇಶ ಪತ್ನಿ ಮಹಿಳಾ ಪೊಲೀಸ್ ಠಾಣೆಗೆ ಮಂಗಳವಾರ ದೂರು ನೀಡಿದ್ದರು. ದೂರಿನ ಮೇರೆಗೆ ವಿಚಾರಣೆ ನಡೆಸಿದ್ದ ಪೊಲೀಸರು ಪ್ರಕರಣವನ್ನು ಪಶ್ಚಿಮ ಠಾಣೆಗೆ ವರ್ಗಾಯಿಸಿದ್ದರು. ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಸಿಪಿಐ ನಾಗರಾಜ ಮೇಕಾ ಮತ್ತು ಪಿಎಸ್‌ಐ ಮಂಜುನಾಥ ಅವರು ವಿರೇಶ ಅವರ ಮೇಲೆ ಹಲ್ಲೆ ಮಾಡಿ, ಕಾಲಿನಿಂದ ಒದ್ದು ವಿದ್ಯುತ್ ಶಾಕ್ ನೀಡಿದ ಕಾರಣ ವೀರೇಶ ಸಾವಿಗೀಡಾಗಿದ್ದಾನೆ ಎಂದು ಮೃತ ವಿರೇಶ ಸಹೋದರಿ ಜ್ಯೋತಿ ದೂರು ನೀಡಿದ್ದರು.
ಘಟನೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳದೇ ಇರುವರಿಂದ ಮಂಗಳವಾರ ರಾತ್ರಿ ನಗರದ ಶಾಸಕ ಡಾ.ಶಿವರಾಜ ಪಾಟೀಲ್ ನೇತೃತ್ವದಲ್ಲಿ ಕುಟುಂಬಸ್ಥರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ರಾತ್ರಿ ಪ್ರತಿಭಟನೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಕಾಯ್ದಿರಿಸಿ ಇಬ್ಬರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

Previous articleಗೋವಿನಜೋಳ ತೆನೆ ರಾಶಿಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ
Next articleಕಾಫಿ ನಾಡನ್ನು ಬೆಚ್ಚಿಬೀಳಿಸಿದ ಹತ್ಯೆ ಪ್ರಕರಣ